ನವದೆಹಲಿ: 'ನೂತನ ಮಾಹಿತಿ ತಂತ್ರಜ್ಞಾನ ನಿಮಗಳ ಅನ್ವಯ ಮೇ 15ರಿಂದ ಜೂನ್ 15ರವರೆಗೆ ಫೇಸ್‌ಬುಕ್‌ನಿಂದ ತೆಗೆದುಹಾಕಿರುವ ಪೋಸ್ಟ್‌ಗಳಿಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು ಜುಲೈ 2ರಂದು ಸಲ್ಲಿಸುತ್ತೇವೆ' ಎಂದು ಫೇಸ್‌ಬುಕ್ ಹೇಳಿದೆ.

ನೂತನ ನಿಯಮಗಳ ಅನ್ವಯ ತಿಂಗಳಿಗೊಮ್ಮೆ ಇಂತಹ ವರದಿಯಲ್ಲಿ ಎಲ್ಲಾ ಸಾಮಾಜಿಕ ಜಾಲತಾಣಗಳು ಸಲ್ಲಿಸುವುದು ಕಡ್ಡಾಯ. ಆ ಅವಧಿಯಲ್ಲಿ ಬಂದ ದೂರುಗಳು, ಆಕ್ಷೇಪಗಳು ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು.

'ಮೇ 15ರಿಂದ ಜೂನ್ 15ರವರೆಗೆ ಬಂದ ದೂರುಗಳು, ಆಕ್ಷೇಪಗಳು ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆಅಂತಿಮ ವರದಿಯಲ್ಲಿ ಜುಲೈ 15ರಂದು ಸಲ್ಲಿಸುತ್ತೇವೆ. ಪರಿಶೀಲನಾ ಸಮಿತಿ ತೆಗೆದುಕೊಂಡ ಕ್ರಮಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆ ತೆಗೆದುಕೊಂಡ ಕ್ರಮಗಳ ಬಗ್ಗೆ ಅಂತಿಮ ವರದಿಯಲ್ಲಿ ಮಾಹಿತಿ ಇರಲಿದೆ' ಎಂದು ಫೇಸ್‌ಬುಕ್ ಹೇಳಿದೆ.'ಜುಲೈ 15ರಂದು ಸಲ್ಲಿಸಲಿರುವ ವರದಿಯಲ್ಲಿ ವಾಟ್ಸ್‌ಆ್ಯಪ್‌ಗೆ ಸಂಬಂಧಿಸಿದ ಮಾಹಿತಿಯೂ ಇರಲಿದೆ' ಎಂದು ವಾಟ್ಸ್‌ಆ್ಯಪ್‌ನ ಮಾತೃಕಂಪನಿಯಾದ ಫೇಸ್‌ಬುಕ್ ಹೇಳಿದೆ.

ಫೇಸ್‌ಬುಕ್ ಭಾರತದಲ್ಲಿ 41 ಕೋಟಿ ಮತ್ತು ವಾಟ್ಸ್‌ಆ್ಯಪ್ 53 ಕೋಟಿ ಬಳಕೆದಾರರನ್ನು ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.