ಮುಂಬೈ: ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಮತ್ತು ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಅವರು ಸರ್ಕಾರ ರಚನೆ ಕುರಿತು ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧರಿಸುತ್ತಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಮೊದಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಹುಮತ ಸಾಬೀತು ಪ್ರಕ್ರಿಯೆ ಗುರುವಾರ ನಡೆಯಬೇಕಿತ್ತು.

ಮುಂಬೈನಲ್ಲಿ ಬಿಜೆಪಿಯ ಎಲ್ಲ ಶಾಸಕರು ಒಟ್ಟಿಗೆ ಸೇರುವಂತೆ ಪಕ್ಷದ ರಾಜ್ಯ ಘಟಕದಿಂದ ಸೂಚನೆ ಹೋಗಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯ ಮುಂದಿನ ನಡೆಯೇನು ಎಂಬ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ಮುಂದಿನ ನಿರ್ಧಾರವನ್ನು ದೇವೇಂದ್ರ ಫಡಣವೀಸ್ ಮತ್ತು ಏಕನಾಥ ಶಿಂಧೆ ಅವರು ತೆಗೆದುಕೊಳ್ಳುತ್ತಾರೆ. ಈ ಜಯವನ್ನು ಸಂಯಮದಿಂದ ನೋಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

‘ನಮ್ಮವರಿಂದಲೇ ದ್ರೋಹ’: ಸಂಪುಟ ಸಭೆಯಲ್ಲಿ ಠಾಕ್ರೆ ವಿದಾಯ ಭಾಷಣ

'ಸರ್ಕಾರ ರಚನೆ ಕುರಿತು ನಮ್ಮ ಪಕ್ಷದ ನಿಲುವು ಏನು ಎಂಬುದನ್ನು ಗುರುವಾರ ತಿಳಿಸುತ್ತೇನೆ' ಎಂದು ಫಡಣವೀಸ್ ತಿಳಿಸಿದ್ದಾರೆ. ಉದ್ಧವ್ ಠಾಕ್ರೆ ರಾಜೀನಾಮೆ ಬಳಿಕ ಫಡಣವೀಸ್ ಅವರ ನಿವಾಸದಲ್ಲಿ ಪಕ್ಷದ ಮುಖಂಡರು ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಫಡಣವೀಸ್ ಮುಖ್ಯಮಂತ್ರಿ, ಸದ್ಯಕ್ಕೆ ಮಂತ್ರಿಯಾಗಿರುವ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗುವ ನಿರೀಕ್ಷೆಯಿದೆ. ವಾರಾಂತ್ಯದಲ್ಲಿ ಫಡಣವೀಸ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರ ಬಿಕ್ಕಟ್ಟು: ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ

Koo App
I welcome the decision of Shri Uddhav Thackeray to resign as CM of Maharashtra. He knew that he had lost the majority the day Shiv Sena minister Shri Eknath Shinde rebelled against him for betraying Hindutva. His tenure has proved that "opportunistic alliances" don’t last.

- C T Ravi (@ctravibjp) 30 June 2022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.