ನವದೆಹಲಿ: ನಕಲಿ ಕಾಲ್ ಸೆಂಟರ್ ಮೂಲಕ ಅಮೆರಿಕದ ಜನರನ್ನು ವಂಚಿಸುತ್ತಿದ್ದ 25 ಮಂದಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ದೆಹಲಿಯ ಮೆಹ್ರಾಲಿ ಪ್ರದೇಶದ ಸೈದುಲ್ಲಾಜಾಬ್ ಪ್ರದೇಶದಲ್ಲಿ ಈ ಕಾಲ್ ಸೆಂಟರ್ ಕಾರ್ಯಾಚರಿಸುತ್ತಿತ್ತು.

ಅಮೆರಿಕ ಸರ್ಕಾರದ ವಿವಿಧ ಯೋಜನೆಗಳು, ನಿರುದ್ಯೋಗಿಗಳು ಮತ್ತು ವಿಕಲಚೇತನರಿಗೆ ಸಹಾಯಧನ ನೀಡುವ ಕುರಿತು ಮತ್ತು ಸದಸ್ಯತ್ವ ಶುಲ್ಕ ಪಾವತಿಸಿ ಎಂದು ಅಮೆರಿಕನ್ನರಿಗೆ ಕರೆ ಮಾಡಿ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲ್ ಸೆಂಟರ್ಗೆ ದಾಳಿ ನಡೆಸಿ, ಬಾಸ್ ಆಗಿದ್ದ ಕಮಲ್ ದಾಸ್ ಸಹಿತ 25 ಉದ್ಯೋಗಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ನಕಲಿ ಹೆಸರು ಮತ್ತು ಇಂಟರ್ನೆಟ್ ಬಳಸಿ ಕರೆ ಮಾಡುತ್ತಿದ್ದ ಬಂಧಿತರು, ವಿವಿಧ ಮೂಲಗಳಿಂದ ಕರೆ ಮಾಡಬೇಕಾದವರ ಮಾಹಿತಿ ಸಂಗ್ರಹಿಸಿ, ಅದಕ್ಕೆ ಪೂರಕವಾಗಿ ಕರೆ ಮಾಡಿ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ, ಸದಸ್ಯತ್ವ ಶುಲ್ಕ ಎಂದು ಹಣ ಪಾವತಿಸಲು ಗೂಗಲ್ ಪ್ಲೇ ಕಾರ್ಡ್ಸ್, ಇಬೇ ಗಿಫ್ಟ್ ಕಾರ್ಡ್ ಮತ್ತು ಅಮೆಜಾನ್ ಗಿಫ್ಟ್ ಕಾರ್ಡ್ ಬಳಸಿ ಪಾವತಿಸುವ ಆಯ್ಕೆ ನೀಡುತ್ತಿದ್ದರು. ಬಳಿಕ ಆ ಕಾರ್ಡ್ ಬಳಸಿಕೊಂಡು, ಅದರಿಂದ ಹಣ ಪಡೆಯುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.