ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಬ್ಬು, ಸಕ್ಕರೆ ಪ್ರಮಾಣ ಕೆಂಪಕ್ಷರದಲ್ಲಿ ಮುದ್ರಿಸಿ’

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಕರಡು ನಿಯಮ ಪ್ರಕಟ
Last Updated 27 ಜೂನ್ 2019, 19:46 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಹಾರವಸ್ತು ಮಾರಾಟ ಸಂಸ್ಥೆಗಳು ಉತ್ಪನ್ನಗಳಲ್ಲಿ ಅಡಕವಾಗಿರುವ ಕೊಬ್ಬು, ಸಕ್ಕರೆ, ಉಪ್ಪಿನ ಪ್ರಮಾಣದ ವಿವರಗಳನ್ನು ‘ಕೆಂಪು ಬಣ್ಣ’ದಲ್ಲಿ ಪೊಟ್ಟಣಗಳ ಮೇಲೆ ಎದ್ದುಕಾಣುವಂತೆ ನಮೂದಿಸುವುದು ಕಡ್ಡಾಯವಾಗಲಿದೆ.

ಈ ನಿಯಮವನ್ನು ಒಳಗೊಂಡ ಕರಡು ಅಧಿಸೂಚನೆಯನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪ್ರಕಟಿಸಿದೆ. ಚಾಲ್ತಿಯಲ್ಲಿರುವ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್‌ ಮತ್ತು ಲೇಬಲಿಂಗ್‌) ನಿಯಮಗಳು 2011’ ಬದಲಾಗಿ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿವೆ.

ಆಕ್ಷೇಪಣೆ, ಸಲಹೆಗಳನ್ನು 30 ದಿನದೊಳಗೆ ಸಲ್ಲಿಸಲುಬಳಕೆದಾರರು ಮತ್ತು ಇತರರಿಗೆ ಸೂಚಿಸಲಾಗಿದೆ. ಪ್ಯಾಕೆಟ್‌ ಮುಂಭಾಗ ಎದ್ದುಕಾಣುವಂತೆ ಮಾಹಿತಿಯ ಮುದ್ರಣ ಸೇರಿದಂತೆ ಉದ್ಯಮದ ಸಂಘಟನೆಗಳು ಸದ್ಯ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಕರಡು ನಿಯಮಗಳನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ.

ಆಹಾರ ವಸ್ತುವಿನಲ್ಲಿ ಏನೇನು ಸೇರಿದೆ ಎಂಬುದನ್ನು ಗ್ರಾಹಕರು ತಿಳಿಯಬೇಕು.ಅದರ ಆಧಾರದಲ್ಲಿ ಆಯ್ಕೆ ಮಾಡುವುದು ಸಾಧ್ಯವಾಗಬೇಕು ಎಂಬುದು ಹೊಸ ನಿಯಮದ ಹಿಂದಿನ ಉದ್ದೇಶ ಎಂದು ಎಫ್‌ಎಸ್‌ಎಸ್‌ಎಐನ ಹೇಳಿಕೆ ತಿಳಿಸಿದೆ.

ಕರಡು ನಿಯಮಗಳ ಪ್ರಕಾರ, ಪೊಟ್ಟಣದಲ್ಲಿ ಅಡಕವಾಗಿರುವ ಪೌಷ್ಟಿಕಾಂಶಗಳು ಅಂದರೆ ಕ್ಯಾಲೊರಿ, ಕೊಬ್ಬು, ಸಕ್ಕರೆ, ಸೋಡಿಯಂ ಇನ್ನಿತರ ಅಂಶಗಳ ಮಾಹಿತಿಯನ್ನು ಪೊಟ್ಟಣದ ಮುಂಭಾಗ ಪ್ರಕಟಿಸಬೇಕು. ಒಂದು ಬಾರಿಗೆ ಬಳಸಬಹುದಾದ ಪ್ರಮಾಣ ಕುರಿತ ಶಿಫಾರಸು ಅನ್ನು ಘೋಷಿಸಬೇಕು.

ಸದ್ಯ, ಆಹಾರ ಉತ್ಪನ್ನ ಉದ್ಯಮಗಳು ಉತ್ಪಾದನೆ ದಿನಾಂಕ ಮತ್ತು ಆಹಾರದ ಬಾಳಿಕೆ ಅವಧಿಯನ್ನು ಪ್ಯಾಕ್‌ಗಳಲ್ಲಿ ಮುದ್ರಿಸುತ್ತಿವೆ. ಈ ಮಾಹಿತಿಗಳನ್ನು ಒಂದೇ ಕಡೆ ಮುದ್ರಿಸಬೇಕು ಎಂದೂ ಕರಡು ನಿಯಮಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT