ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್‌ ಮನೆ ಬಳಿ ಗುಂಡಿನ ದಾಳಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ವಿಚಾರಣೆ ಸಾಧ್ಯತೆ

Published 27 ಏಪ್ರಿಲ್ 2024, 15:40 IST
Last Updated 27 ಏಪ್ರಿಲ್ 2024, 15:40 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಅವರ ಮನೆ ಬಳಿ ನಡೆದಿದ್ದ ಗುಂಡಿನ ದಾಳಿಗೆ ಸಂಬಂಧಿಸಿ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೊಯ್‌ನನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಈ ಕೃತ್ಯದ ಸಂಬಂಧ ಆತನ ಸಹೋದರ ಅನ್ಮೋಲ್‌ ಬಿಷ್ಣೊಯ್‌ಗಾಗಿ ಈಗಾಗಲೇ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದೂ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಾರೆನ್ಸ್‌ ಬಿಷ್ಣೊಯ್ ಸದ್ಯ ಗುಜರಾತ್‌ನ ಸಾಬರಮತಿಯಲ್ಲಿರುವ ಜೈಲಿನಲ್ಲಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಲಾಗುವುದು. ಆತನ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರ ಕಾಯ್ದೆ (ಎಂಸಿಒಸಿಎ) ಅನ್ವಯ ಮೊಕದ್ದಮೆ ದಾಖಲಿಸಲಾಗುವುದು ಎಂದೂ ತಿಳಿಸಿದ್ದಾರೆ.

ಮುಂಬೈನ ಬಾಂದ್ರಾದಲ್ಲಿನ ಸಲ್ಮಾನ್‌ ಮನೆ ಬಳಿ ಈ ತಿಂಗಳ ಆರಂಭದಲ್ಲಿ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಅನ್ಮೋಲ್‌ ಬಿಷ್ಣೊಯ್ ಇದರ ಹೊಣೆ ಹೊತ್ತುಕೊಂಡಿದ್ದನು.

ಕೃತ್ಯದ ಸಂಬಂಧ ಅನ್ಮೋಲ್‌ನ ವಿಚಾರಣೆ ಆಗಬೇಕಿದೆ. ಆತ ಕೆನಡಾದಲ್ಲಿ ನೆಲೆಸಿದ್ದು, ಆಗಾಗ್ಗೆ ಅಮೆರಿಕಕ್ಕೆ ತೆರಳುತ್ತಿರುತ್ತಾನೆ. ಕೃತ್ಯದ ಹೊಣೆ ಹೊತ್ತು ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದ ಪೋಸ್ಟ್‌ನ ಐ.ಪಿ ವಿಳಾಸದ ಜಾಡಿನ  ತನಿಖೆಯ ಪ್ರಕಾರ, ಅದರ ಮೂಲ ಪೋರ್ಚುಗಲ್‌ನಲ್ಲಿ ಇರುವುದು ಗೊತ್ತಾಗಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT