ಹೈದರಾಬಾದ್: ಹೆಪಟೈಟಿಸ್ ಎ ಕಾಯಿಲೆಗೆ ‘ಹ್ಯಾವಿಶ್ಯೂರ್’ ಲಸಿಕೆಯನ್ನು ದೇಶದ ಪ್ರಮುಖ ಜೈವಿಕ ಔಷಧೀಯ ಕಂಪನಿ ಹೈದರಾಬಾದ್ ಮೂಲದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್) ದೇಶೀಯವಾಗಿ ಅಭಿವೃದ್ಧಿಪಡಿಸಿದೆ.

‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯಡಿ, ಹೈದರಾಬಾದ್ನಲ್ಲಿ ಅಭಿವೃದ್ಧಿಪಡಿಸಿರುವ ಹ್ಯಾವಿಶ್ಯೂರ್, ಹೆಪಟೈಟಿಸ್ ಎ ಕಾಯಿಲೆಯ ಮೊದಲ ಲಸಿಕೆ ಎನಿಸಿದೆ. ರಾಷ್ಟ್ರೀಯ ಡೇರಿ ಡೆವಲಪ್ಮೆಂಟ್ ಬೋರ್ಡ್ನ (ಎನ್ಡಿಡಿಬಿ) ಅಂಗಸಂಸ್ಥೆಯೂ ಆದ ಐಐಎಲ್, ಈ ಲಸಿಕೆಯನ್ನು ಹೈದರಾಬಾದ್ನಲ್ಲಿ ಬಿಡುಗಡೆ ಮಾಡಿದೆ.

ಹೆಪಟೈಟಿಸ್ ಎ ಪಿತ್ತಜನಕಾಂಗದ ಸೋಂಕು. ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲಾಗಿರುವ ಇದು ಸಾಂಕ್ರಾಮಿಕ ರೋಗವು ಹೌದು. ಸಾಮನ್ಯವಾಗಿ ಕಲುಷಿತ ಆಹಾರ ಅಥವಾ ಕಲುಷಿತ ನೀರಿನ ಸೇವನೆಯ ಮೂಲಕ ಹರಡುತ್ತದೆ. ಹೆಪಟೈಟಿಸ್ ಎ ರೋಗಿಯ ನೇರ ಸಂಪರ್ಕಕ್ಕೆ ಬಂದವರಿಗೂ ಇದು ಹರಡುತ್ತದೆ. ಈ ಕಾಯಿಲೆ ತಡೆಗಟ್ಟುವಲ್ಲಿ ಹ್ಯಾವಿಶ್ಯೂರ್ ಲಸಿಕೆಯು ನಿರ್ಣಾಯಕ ಪಾತ್ರ ವಹಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.