ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು: ತುರ್ತು ಭೂಸ್ಪರ್ಶ ನೆಲೆಯಲ್ಲಿ ವಾಯುಪಡೆಯ 5 ಹೆಲಿಕಾಪ್ಟರ್‌ಗಳು ಲ್ಯಾಂಡಿಂಗ್

Published 2 ಏಪ್ರಿಲ್ 2024, 9:27 IST
Last Updated 2 ಏಪ್ರಿಲ್ 2024, 9:27 IST
ಅಕ್ಷರ ಗಾತ್ರ

ಶ್ರೀನಗರ: ಅಮೆರಿಕ ನಿರ್ಮಿತ 'ಚಿನೂಕ್' ಸೇರಿದಂತೆ ಭಾರತೀಯ ವಾಯುಪಡೆಯ (ಐಎಎಫ್) ಐದು ಹೆಲಿಕಾಪ್ಟರ್‌ಗಳು, ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ತುರ್ತು ಭೂಸ್ಪರ್ಶ ನೆಲೆಯಲ್ಲಿ (ಇಎಲ್‌ಎಫ್) ಯಶಸ್ವಿ ಲ್ಯಾಂಡಿಂಗ್ ನಡೆಸಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ, ತುರ್ತು ಭೂಸ್ಪರ್ಶ ನೆಲೆಯ ಕಾರ್ಯಾಚರಣೆ ಆರಂಭಿಸಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಎಂಬ ಹೆಗ್ಗಳಿಕೆಗೆ ಭಾಜನವಾಯಿತು.

ಜಮ್ಮುವಿನ ತುರ್ತು ಲ್ಯಾಂಡಿಂಗ್ ಸ್ಟ್ರಿಪ್‌ನಲ್ಲಿ ವಾಯುಪಡೆಯ ವಿಮಾನಗಳು ಇದೇ ಮೊದಲ ಬಾರಿಗೆ ಪ್ರಾಯೋಗಿಕ ಯಶಸ್ವಿ ಲ್ಯಾಂಡಿಂಗ್ ಹಾಗೂ ಟೇಕ್-ಆಫ್ ಅಭ್ಯಾಸವನ್ನು ನಡೆಸಿದವು.

ಅಧಿಕಾರಿಗಳ ಪ್ರಕಾರ, ಅಮೆರಿಕ ನಿರ್ಮಿತ ಎರಡು ಚಿನೂಕ್, ಮಂಗಳವಾರ ನಸುಕಿನ ವೇಳೆಯಲ್ಲಿ ರಷ್ಯಾ ನಿರ್ಮಿತ ಒಂದು ಎಂಐ-17 ಮತ್ತು ವಾಯುಪಡೆಯ ಎರಡು ಸುಧಾರಿತ ಹಗುರ ಹೆಲಿಕಾಪ್ಟರ್‌ (ಎಎಲ್‌ಎಚ್), ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿಯ ವಾನ್ಪೋ-ಸಂಗಮ್ ಮಾರ್ಗದಲ್ಲಿ ನಿರ್ಮಿತ ಇಎಲ್‌ಎಫ್ ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದವು.

ಇಲ್ಲಿ 2020ರಲ್ಲಿ ಭಾರತೀಯ ವಾಯುಪಡೆಯ ವಿಮಾನಗಳ ತುರ್ತು ಭೂಸ್ಪರ್ಶಕ್ಕಾಗಿ 3.5 ಕಿ.ಮೀ. ಉದ್ದನೆಯ ರಸ್ತೆಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿತ್ತು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜತೆ ದೇಶದ ಇತರೆ ಭಾಗಗಳಲ್ಲಿ ಇದೇ ರೀತಿಯ ಯೋಜನೆ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಭೂಸ್ಪರ್ಶ ನೆಲೆ ಕಾರ್ಯಾಚರಿಸುತ್ತಿವೆ.

ಈ ಎಲ್ಲ ಹೆಲಿಕಾಪ್ಟರ್‌ಗಳನ್ನು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳಿಗಾಗಿ ಬಳಕೆ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT