ನವದೆಹಲಿ: ನಮ್ಮ ಆಪ್ತರು ಯಾರು? ದೇಶದ ಸಾಮಾನ್ಯ ಜನತೆಯೇ ನಮ್ಮ ಆಪ್ತರು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಏನೂ ಒಳ್ಳೆಯದಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಲೇ ಬಂದಿದೆ. ಭಾರತದ ಸಾಮರ್ಥ್ಯದ ಮೇಲೆ ಕಾಂಗ್ರೆಸ್ಗೆ ನಂಬಿಕೆಯಿಲ್ಲ ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಓದಿ:ಸ್ನೇಹಿತರಿಗೆ ಅನುಕೂಲ ಕಲ್ಪಿಸುತ್ತಿರುವ ಪ್ರಧಾನಿ: ರಾಹುಲ್ ಗಾಂಧಿ ಟೀಕೆ

ಸ್ನೇಹಿತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂದು ನಮ್ಮ ವಿರುದ್ಧ ನಿರಂತರ ಆರೋಪ ಮಾಡುವವರಿಗೆ ‘ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ’ ಕಾಣಿಸುವುದಿಲ್ಲ. ಈ ಯೋಜನೆ ಸ್ನೇಹಿತರಿಗೆ ತಲುಪುವುದಿಲ್ಲ ನೋಡಿ ಎಂದು ನಿರ್ಮಲಾ ವ್ಯಂಗ್ಯವಾಡಿದ್ದಾರೆ.

‘ಸ್ನೇಹಿತರು ಎಲ್ಲಿದ್ದಾರೆ? ಅವರು ಬಹುಶಃ ಜನ ತಿರಸ್ಕರಿಸಿರುವ ಪಕ್ಷದ ನೆರಳಿನ ಹಿಂದೆ ಅಡಗಿದ್ದಾರೆ. ಬಂದರೊಂದನ್ನು ಅಭಿವೃದ್ಧಿಪಡಿಸಲು ಆಹ್ವಾನಿಸಿದವರ ನೆರಳಿನ ಹಿಂದೆ ಇದ್ದಾರೆ. ಅವರು ಆಹ್ವಾನಿಸಿದ್ದರಷ್ಟೇ, ಮುಕ್ತವಾದ ಟೆಂಡರ್ ಇಲ್ಲ, ಜಾಗತಿಕ ಟೆಂಡರ್ಗಳನ್ನೂ ಕರೆದಿಲ್ಲ’ ಎಂದು ನಿರ್ಮಲಾ ಹೇಳಿದ್ದಾರೆ.

ಓದಿ:ಬ್ರಿಟೀಷರೇ ರೈತರೆದುರು ನಿಲ್ಲಲು ಆಗದಿದ್ದಾಗ, ಮೋದಿ ಯಾವ ಲೆಕ್ಕ: ರಾಹುಲ್ ಗಾಂಧಿ

‘ಹೊಸ ಕೃಷಿ ಕಾಯ್ದೆಗಳ ಮೂಲಕ ತಮ್ಮ ಸ್ನೇಹಿತರಿಗೆ ಮುಕ್ತ ಮಾರ್ಗ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.