ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: 110 ಮಾಜಿ ಬಂಡುಕೋರರು ಬಿಜೆಪಿಗೆ ಸೇರ್ಪಡೆ

Last Updated 18 ಏಪ್ರಿಲ್ 2023, 15:44 IST
ಅಕ್ಷರ ಗಾತ್ರ

ಡಿಫೂ: 110 ಮಾಜಿ ಬಂಡುಕೋರರು ಅಸ್ಸಾಂನ ಕಬ್ರಿ ಆಂಗ್ಲೋಂಗ್‌ ಜಿಲ್ಲೆಯಲ್ಲಿ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು.

ಅವರೆಲ್ಲರೂ ಮೊದಲಿಗೆ ನಿಷೇಧಿತ ಬಂಡುಕೋರ ಸಂಘಟನೆಯಾದ ನ್ಯಾಷನಲ್‌ ಡೆಮಾಕ್ರೆಟಿಕ್‌ ಫ್ರಂಟ್‌ ಆಫ್‌ ಬೋಡೊಲ್ಯಾಂಡ್‌ನ (ಎನ್‌ಡಿಎಫ್‌ಬಿ) ಕೇಡರ್‌ಗಳಾಗಿದ್ದರು.

ಕಬ್ರಿ ಆಂಗ್ಲೋಂಗ್‌ ಸ್ವಾಯತ್ತ ಸಮಿತಿಯ (ಕೆಎಎಸಿ) ಮುಖ್ಯ ಕಾರ್ಯಕಾರಿ ತುಲಿರಾಮ್‌ ರೋಂಘಾಂಗ್‌ ಅವರು ಡಿಫೂದಲ್ಲಿಯ ಬಿಜೆಪಿ ಕಚೇರಿಯಲ್ಲಿ ಇವರನ್ನೆಲ್ಲ ಪಕ್ಷಕ್ಕೆ ಬರ ಮಾಡಿಕೊಂಡರು. ‘ಎನ್‌ಡಿಎಫ್‌ಬಿಯ 110 ಮಾಜಿ ಸದಸ್ಯರು ನಮ್ಮ ಪಕ್ಷವನ್ನು ಸೇರಿದ್ದಾರೆ. ಅವರೆಲ್ಲರೂ ಭಿನ್ನ ಪ್ರದೇಶಗಳಿಗೆ ಸೇರಿರುವವರು ಮತ್ತು ಬಂಡುಕೋರ ಸಂಘಟನೆಯಲ್ಲಿ ಉನ್ನತ ಹುದ್ದೆಗಳಲ್ಲಿ ಇದ್ದವರು’ ಎಂದು ಅವರು ಹೇಳಿದರು.

ಇವರೆಲ್ಲರ ಸೇರ್ಪಡೆಯು ಕಬ್ರಿ ಆಂಗ್ಲೋಂಗ್‌ನಲ್ಲಿ ಪಕ್ಷವನ್ನು ಬಲಪಡಿಸಲು ಮಾತ್ರವಲ್ಲದೇ ನೆರೆಯ ಪೂರ್ವ ಕಬ್ರಿ ಆಂಗ್ಲೋಂಗ್‌ ಮತ್ತು ಡಿಮಾ ಹಸಾವೊ ಜಿಲ್ಲೆಗಳಲ್ಲೂ ಪಕ್ಷ ಬಲಪಡಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಡಿಫೂ ಶಾಸಕ ಬಿದ್ಯಾಯ್ಸಂಗ್‌ ಎಗ್ಲೆಂಗ್‌ ಮತ್ತು ಕೆಎಎಸಿಯ ಇತರ ಸದಸ್ಯರು ಈ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT