ನವದೆಹಲಿ: ಅಪ್ಪಟ ಕಾಂಗ್ರೆಸ್ಸಿಗ ಹಾಗೂ ಗಾಂಧಿ ಕುಟುಂಬದ ಆಪ್ತ ಎಂದೇ ಗುರುತಿಸಿಕೊಂಡಿದ್ದ ಪ್ರಣವ್ ಮುಖರ್ಜಿ ಕ್ಲರ್ಕ್ ಆಗಿ ವೃತ್ತಿ ಜೀವನ ಆರಂಭಿಸಿದರೂನಂತರದ ಕೆಲವು ದಿನಗಳು ಪತ್ರಕರ್ತರಾಗಿಯೂ ಕೆಲಸ ಮಾಡಿದರು.

ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಎಲ್ಎಲ್ಬಿ ಪೂರೈಸಿದರು. ವಿದ್ಯಾಭ್ಯಾಸದ ಬಳಿಕ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಪ್ರಥಮ ದರ್ಜೆ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದರು. ಎರಡು ವರ್ಷದ ಬಳಿಕ ಆ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಬಂಗಾಳಿಯ ‘ಮದರ್ಲ್ಯಾಂಡ್‘ ಪತ್ರಿಕೆಗೆ ವರದಿಗಾರರಾಗಿ ಸೇರಿಕೊಂಡರು.

ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ರಾಜಕಾರಣದತ್ತ ಮುಖ ಮಾಡಿದರು. ಇದೇ ಸಮಯಕ್ಕೆ ಮಿಡ್ನಾಪುರ ಉಪಚುನಾವಣೆ ಘೋಷಣೆಯಾಯಿತು. ವರದಿಗಾರಿಕೆಯನ್ನು ಬಿಟ್ಟು ಪ್ರಣವ್ ಚುನಾವಣೆ ಪ್ರಚಾರದತ್ತ ನಡೆದರು.

1968ರಲ್ಲಿ ನಡೆದ ಮಿಡ್ನಾಪುರ ಉಪಚುನಾವಣೆ ಪ್ರಣವ್ ಮುಖರ್ಜಿ ಅವರ ಜೀವನ ಪಥವನ್ನು ಬದಲಿಸಿತು. ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಮೂಲಕ ಅಭ್ಯರ್ಥಿಯ ಗೆಲುವಿಗೂ ಕಾರಣರಾದರು.

ಇದನ್ನೂ ಓದಿ:ಭಾರತದ 'ರತ್ನ', ರಾಜಕೀಯ ಮುತ್ಸದ್ಧಿ ಪ್ರಣವ್ ಮುಖರ್ಜಿ ಇನ್ನಿಲ್ಲ

ಉಪಚುನಾವಣೆಗೆ ಪ್ರಣವ್ ದುಡಿದ ಕಾರ್ಯವೈಖರಿ ಸಂಘಟನೆ, ಪ್ರಚಾರ ತಂತ್ರ ಇಂದಿರಾ ಗಾಂಧಿ ಅವರ ಗಮನ ಸೆಳೆಯಿತು. ಕೂಡಲೇ ಪ್ರಣವ್ ಅವರನ್ನು ಪಕ್ಷಕ್ಕೆ ಕರೆತಂದರು. 1969ರಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿದರು. ಅಂದಿನಿಂದ ಶುರವಾದ ಕಾಂಗ್ರೆಸ್ ಜೊತೆಗಿನ ಪಯಣ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿತು.

1975, 1981, 1993, 1999 ರಲ್ಲಿ ರಾಜ್ಯಸಭೆಗೆ ನೇಮಕವಾಗಿದ್ದರು. ಪ್ರಣವ್ ಮುಖರ್ಜಿ ಅವರು ಹಣಕಾಸು ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ಅವರಿಗೆ ಆಪ್ತರಾಗಿದ್ದರು. ಕಾಂಗ್ರೆಸ್ ವಲಯದಲ್ಲಿ ಅವರನ್ನು ಎಲ್ಲರೂ ‘ಬಂಗಾಳಿ ಬಾಬು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಯುಪಿಎ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ನೆಹರೂ–ಗಾಂಧಿ ಕುಟುಂಬದ ನಿಷ್ಠರಾಗಿದ್ದ ಮುಖರ್ಜಿ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಂಗ್ರೆಸ್ ಅವರನ್ನು 2012ರಲ್ಲಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿತು. 2017ರವರೆಗೆ ಅವರು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ಅಪ್ಪಟ ಕಾಂಗ್ರೆಸ್ ನಾಯಕರಾಗಿದ್ದ ಪ್ರಣವ್ ಅವರನ್ನು ಎನ್ಡಿಎ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ‘ಭಾರತ ರತ್ನ‘ಗೆ ಆಯ್ಕೆ ಮಾಡಿತು. ಪ್ರಣವ್ ಭಾರತ ರತ್ನ ಪುರಸ್ಕಾರ ಸ್ವೀಕರಿಸಿದ ಆರನೇ ಮಾಜಿ ರಾಷ್ಟ್ರಪತಿಯಾದರು

ಇವುಗಳನ್ನು ಓದಿ

ವರ್ಸಟೈಲ್ ರಾಜಕಾರಣಿಯ ವೈಶಿಷ್ಟ್ಯ ಬದುಕು...

ಕಾಂಗ್ರೆಸ್ ಎಲೆ ಮೇಲಿನ ಜಲಬಿಂದು ಪ್ರಣವ್

ಪ್ರಣವ್ ಮುಖರ್ಜಿ ನಿಧನಕ್ಕೆ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರ ಸಂತಾಪ

ಭಾರತದ ಕಂಡ ಸಂಭಾವಿತ ರಾಜಕಾರಣಿ ಪ್ರಣಬ್ ಮುಖರ್ಜಿ

ಪ್ರಣವ್ ಮುಖರ್ಜಿ ನಿಧನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.