ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ನ ಅತ್ಯುನ್ನತ ಗೌರವ: ಭಾರತದ ಜನತೆಗೆ ಸಂದ ಗೌರವ ಎಂದ ಪ್ರಧಾನಿ ಮೋದಿ

Published 14 ಜುಲೈ 2023, 11:08 IST
Last Updated 14 ಜುಲೈ 2023, 11:08 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಫ್ರಾನ್ಸ್‌ ದೇಶವು ತನ್ನ ಅತ್ಯುನ್ನತ ಗೌರವವಾದ ‘ಲೀಜನ್‌ ಆಫ್‌ ಆನರ್‌ ಗ್ರ್ಯಾಂಡ್‌ ಕ್ರಾಸ್‌’ ನೀಡಿ ಗೌರವಿಸಿದ್ದು, ಮೋದಿ ಟ್ವೀಟ್‌ ಮೂಲಕ ಧನ್ಯವಾದ ತಿಳಿಸಿದ್ದಾರೆ. ಫ್ರಾನ್ಸ್‌ನ ರಾಷ್ಟ್ರೀಯ ದಿನವಾದ ‘ಬಾಸ್ಟಿಲ್‌ ಡೇ’ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ.

‘ಲೀಜನ್‌ ಆಫ್‌ ಆನರ್‌ ಗ್ರ್ಯಾಂಡ್‌ ಕ್ರಾಸ್‌’ ಅನ್ನು ನಾನು ಬಹಳ ನಮ್ರತೆಯಿಂದ ಸ್ವೀಕರಿಸುತ್ತೇನೆ. ಇದು ಭಾರತದ 140 ಕೋಟಿ ಜನರಿಗೆ ಸಂದ ಗೌರವವಾಗಿದೆ. ಈ ಗೌರವ ನೀಡಿದ್ದಕ್ಕಾಗಿ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್‌ ಮತ್ತು ಫ್ರಾನ್ಸ್‌ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇದು ಭಾರತದ ಬಗ್ಗೆ ಫ್ರಾನ್ಸ್‌ ಹೊಂದಿರುವ ಆಳವಾದ ಪ್ರೀತಿ ಮತ್ತು ರಾಷ್ಟ್ರದೊಂದಿಗೆ ಸ್ನೇಹವನ್ನು ಹೆಚ್ಚಿಸುವ ಸಂಕಲ್ಪ ಸೂಚಕವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

‘ಲೀಜನ್‌ ಆಫ್‌ ಆನರ್‌’ ಹೆಸರಲ್ಲಿ ಫ್ರಾನ್ಸ್‌ ದೇಶ ನೀಡುವ ಅತ್ಯುನ್ನತ್ತ ಮಟ್ಟದ ಗೌರವಗಳನ್ನು ಐದು ಶ್ರೇಣಿಯಲ್ಲಿ ವರ್ಗೀಕರಿಸಲಾಗಿದೆ. ಈ ಪೈಕಿ ಮೋದಿಯವರಿಗೆ ನೀಡಿರುವ ‘ಗ್ರ್ಯಾಂಡ್‌ ಕ್ರಾಸ್‌ ಆಫ್‌ ದ ಲೀಜನ್‌’ ಅತ್ಯುನ್ನತ ಪ್ರಶಸ್ತಿಯಾಗಿದೆ. ನರೇಂದ್ರ ಮೋದಿ ಅವರು ಈ ಗೌರವಕ್ಕೆ ಭಾಜನರಾದ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ. ಇದೂ ಸೇರಿದಂತೆ ಒಟ್ಟು 14 ದೇಶಗಳ ಅತ್ಯುನ್ನತ ಗೌರವಗಳಿಗೆ ಪ್ರಧಾನಿ ಮೋದಿಯವರು ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT