ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದರೆ ಕೋಟಿ ಹಣ, ಹೆಲಿಕಾಪ್ಟರ್, ಚಂದ್ರನಲ್ಲಿಗೆ ಪ್ರವಾಸ; ಅಭ್ಯರ್ಥಿಯ ಭರವಸೆ!

Last Updated 25 ಮಾರ್ಚ್ 2021, 17:15 IST
ಅಕ್ಷರ ಗಾತ್ರ

ಚೆನ್ನೈ: ಚುನಾವಣೆ ಬಂತೆಂದರೆ ಅಭ್ಯರ್ಥಿಗಳು ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕೆಂದು ಶತಾಯುಗತಾಯ ಪ್ರಯತ್ನಿಸುತ್ತಾರೆ. ಇದಕ್ಕಾಗಿ ಪೊಳ್ಳು ಭರವಸೆಗಳನ್ನು ನೀಡುವುದು ಸಾಮಾನ್ಯ.

ಆದರೆ ತಮಿಳುನಾಡಿನ ಅಭ್ಯರ್ಥಿಯೊಬ್ಬರು ಕನಸಿಗೂ ಮೀರಿದ ಭರವಸೆಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಹಾಗೊಂದು ವೇಳೆ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದರೆ ಹೆಲಿಕಾಪ್ಟರ್, ದುಬಾರಿ ಐಫೋನ್ ಮತ್ತು ಈಜುಕೊಳದೊಂದಿಗೆ ಮೂರು ಅಂತಸ್ತಿನ ಕಟ್ಟಡ ಕಟ್ಟಿಸುವುದಾಗಿ ಭರವಸೆ ನೀಡಿದ್ದಾರೆ.

ಅಷ್ಟೇ ಯಾಕೆ ಚಂದ್ರನಲ್ಲಿಗೆ 10 ದಿನಗಳ ಪ್ರವಾಸ! ಹೌದು, ನೀವಿದನ್ನು ನಂಬಲೇಬೇಕು. ಇಲ್ಲಿಗೆ ಮುಗಿದಿಲ್ಲ ಪ್ರತಿ ಮನೆಗೆ ಒಂದು ಕೋಟಿ ರೂ., 20 ಲಕ್ಷ ರೂ. ಮೌಲ್ಯದ ಕಾರು ಮತ್ತು ಮಹಿಳೆಯರಿಗೆ ಆಭರಣ, ಮನೆ ಕೆಲಸಕ್ಕಾಗಿ ಸಹಾಯ ಮಾಡಲು ರೋಬೋಟ್ ನೀಡುವುದಾಗಿವಾಗ್ದಾನಮಾಡಿದ್ದಾರೆ.

ಮದುರೈ ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತುಲಾಂ ಶರವಣನ್ ಎಂಬವರೇ ಕನಸಿಗೂ ಮೀರಿದ ಭರವಸೆಯನ್ನು ನೀಡಿದ್ದಾರೆ.

ಅಷ್ಟಕ್ಕೂ ಈ ಎಲ್ಲ ಭರವಸೆಗಳನ್ನು ಈಡೇರಿಸುವಷ್ಟು ಹಣ ಅವರ ಬಳಿಯಿದೆಯೇ? ಎಂಬುದು ಮತದಾರರಲ್ಲಿ ಕುತೂಹಲ ಮೂಡಿಸಿದೆ.

ಆದರೆ ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ನಿಜ ಬಣ್ಣ ಬಯಲಾಗಿದೆ. ನಾನು ನಾಮಪತ್ರ ಸಲ್ಲಿಸಲು 10,000 ರೂ. ಸಾಲ ತೆಗೆದುಕೊಂಡಿದ್ದೇನೆ. ನಾಮಪತ್ರ ಸಲ್ಲಿಸಲು ನನ್ನ ಬಳಿ ಹಣವಿರಲಿಲ್ಲ ಎಂಬ ಸತ್ಯವನ್ನು ಶರವಣನ್ ಬಿಚ್ಚಿಟ್ಟಿದ್ದಾರೆ.

ಹಾಗಿದ್ದರೂ ಪೊಳ್ಳು ಭರವಸೆಗಳನ್ನು ಏಕೆ ನೀಡಿದ್ದಾರೆ ಎಂಬುದಕ್ಕೆ ಸ್ಪಷ್ಟನೆಯನ್ನು ನೀಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನೀಡುವ ಸುಳ್ಳು ಪ್ರಣಾಳಿಕೆಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾನು ಬಯಸುತ್ತೇನೆ. ಏನು ಬೇಕಾದರೂ ಭರವಸೆ ನೀಡಬಹುದು. ಆದರೆ ಅನುಷ್ಠಾನ ಮಾಡಬೇಕು ಎಂಬುದೇ ಮುಖ್ಯ ಎಂದವರು ವಿವರಿಸಿದ್ದಾರೆ.

ಒಟ್ಟಿನಲ್ಲಿ ಶರವಣನ್ ಅವರ ಭರವಸೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಹರಡಿವೆ. ಅತ್ತ ಶರವಣನ್, ರಾಜಕೀಯ ಪಕ್ಷಗಳು ನೀಡುವ ಸುಳ್ಳು ಭರವಸೆಗಳನ್ನು ನಂಬಬೇಡಿ ಎಂದು 20,000ದಷ್ಟು ಕರಪತ್ರಗಳನ್ನು ವಿತರಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ನೀಡಿದವಾಗ್ದಾನಗಳನ್ನು ನಂಬಿಕೊಂಡು ಜನರು ಮತ ಚಲಾಯಿಸಬಾರದು. ಪ್ರಾಮಾಣಿಕ ವ್ಯಕ್ತಿಗಳಿಗೆ ಮತ ಹಾಕಬೇಕು. ಅಂತಹ ಸುಳ್ಳು ಭರವಸೆಗಳ ಬಗ್ಗೆ ಅರಿಯಲು ನನ್ನ ಕರಪತ್ರವು ಜನರಿಗೆ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT