ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಬದಹಾಲ್ ಗ್ರಾಮವು ಅಸಹಜ ಸರಣಿ ಸಾವುಗಳಿಂದ ಕಂಗೆಟ್ಟಿದೆ. ನಗು, ಸಂತೋಷದಿಂದ ತುಂಬಿದ್ದ ಮಹಮ್ಮದ್ ಅಸ್ಲಂ ಮತ್ತು ಪತ್ನಿ ಶಾಕಿಯಾ ಬಿ ಅವರ ಮನೆಯು ಒಂದೂವರೆ ತಿಂಗಳಲ್ಲಿ ಸಾವಿನ ಮನೆಯಾಗಿ ಪರಿವರ್ತನೆಯಾಗಿದೆ.

ಡಿಸೆಂಬರ್ 7ರಿಂದ ಜನವರಿ 19ರ ಅವಧಿಯಲ್ಲಿ ಅಸ್ಲಂ ಅವರ ಆರು ಮಕ್ಕಳು ಸೇರಿ ಪರಸ್ಪರ ಸಂಬಂಧಿತ ಮೂರು ಕುಟುಂಬಗಳ 17 ಮಂದಿ ಮೃತಪಟ್ಟಿದ್ದಾರೆ. ಈ ನಿಗೂಢ ಸಾವುಗಳಿಂದ ಅಸ್ಲಂ ಅವರ ಕುಟುಂಬ ಮಾತ್ರವಲ್ಲದೆ ಇಡೀ ಗ್ರಾಮವೇ ಆಘಾತಕ್ಕೆ ಒಳಗಾಗಿದೆ.

ಸ್ಥಳೀಯ ಪತ್ರಕರ್ತರ ಮೂಲಕ ‘ಪ್ರಜಾವಾಣಿ’ ಅಸ್ಲಂ ಅವರನ್ನು ಸಂಪರ್ಕಿಸಿದಾದ, ‘ಆರು ಮಕ್ಕಳನ್ನು ಮತ್ತು ತಂದೆ–ತಾಯಿಯಂತೆ ಮನೆಯಲ್ಲಿ ಇದ್ದ ಚಿಕ್ಕಪ್ಪ–ಚಿಕ್ಕಮ್ಮನನ್ನು ಕಳೆದುಕೊಂಡ ನಂತರ ನನ್ನಷ್ಟು ದುರದೃಷ್ಟವಂತ ಬೇರೆ ಯಾರುತಾನೆ ಇರಲು ಸಾಧ್ಯ?’ ಎಂದು ದುಃಖಿಸಿದರು.

‘ಸಾವಿನ ಹಿಂದಿನ ರಹಸ್ಯ ಶೀಘ್ರವೇ ಬಯಲಾಗಲಿದೆ. ಸತ್ಯವು ಶೀಘ್ರ ಹೊರಬರಲಿ ಎಂದು ಅಲ್ಲಾಹುವನ್ನು ಪ್ರಾರ್ಥಿಸುತ್ತೇನೆ’ ಎಂದು ಅವರು ಹೇಳಿದರು.

ಮಕ್ಕಳ ಆಟ, ನಗು, ಸಂತೋಷ–ಸಂಭ್ರಮದಿಂದ ಕಂಗೊಳಿಸುತ್ತಿದ್ದ ಅಸ್ಲಂ ಅವರ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.

ಸರಣಿ ಸಾವುಗಳಿಗೆ ಕಾರಣ ಇನ್ನೂ ಅಸ್ಪಷ್ಟವಾಗಿದೆ. ಸ್ಥಳೀಯ, ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳು, ತಜ್ಞರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾರಣವನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ.

‘ಸರಣಿ ಸಾವುಗಳಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಇದು ಸಾಂಕ್ರಾಮಿಕ ರೋಗವಾಗಿರಬಹುದೇ ಎಂಬ ಭಯದಲ್ಲಿದ್ದಾರೆ. ಆದರೆ 1,500 ಜನರಿರುವ ಗ್ರಾಮದಲ್ಲಿ ಈವರೆಗೆ ಮೂರು ಕುಟುಂಬದಲ್ಲಿ ಮಾತ್ರ ಸಾವುಗಳು ಸಂಭವಿಸಿವೆ’ ಎಂದು ಸ್ಥಳೀಯ ಪತ್ರಕರ್ತ ಸುನಿತ್ ಭಾರ್ಗವ್ ತಿಳಿಸಿದರು.

ಕಂಟೈನ್ಮೆಂಟ್ ವಲಯ ಎಂದು ಘೋಷಣೆ

ಸ್ಥಳೀಯ ಆಡಳಿತದ ಅಧಿಕಾರಿಗಳು ಬದಹಾಲ್ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಿದ್ದಾರೆ. ಗ್ರಾಮಸ್ಥರು ಒಟ್ಟಿಗೆ ಒಂದೆಡೆ ಸೇರಲು ನಿಷೇಧ ಹೇರಲಾಗಿದೆ ಮತ್ತು ಗ್ರಾಮಸ್ಥರ ಆಹಾರ ಸೇವನೆ ಮೇಲೆ ನಿಗಾ ಇಡಲಾಗಿದೆ. ಇದಕ್ಕೂ ಮುನ್ನ ಅಧಿಕಾರಿಗಳು ಅಸ್ಲಂ ಅವರ ಮನೆ ಮತ್ತು ಮಹಮ್ಮದ್ ರಫೀಕ್ ಅವರ ಮನೆ ಸಮೀಪದ ಬಾವಿಯ ನೀರಿನ ‘ಮಾದರಿ’ಗಳನ್ನು ಪಡೆದು ‘ಸೀಲ್’ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.