ತಹವ್ವುರ್ ರಾಣಾ: ಪಿಟಿಐ ಚಿತ್ರ
ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಗಡೀಪಾರು ಮಾಡಲು ಇದ್ದ ಎಲ್ಲ ಅಡೆತಡೆಗಳನ್ನು ಅಮೆರಿಕ ತೆಗೆದುಹಾಕಿದ ನಂತರ ಇಂದು(ಏ.10) ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರವಿ ಪೂಜಾರಿ(2020):ರಾಯಿಟರ್ಸ್ ಚಿತ್ರ
ಕೊಲೆ, ಸುಲಿಗೆ ಸೇರಿದಂತೆ 97 ಅಪರಾಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ ರವಿ ಪೂಜಾರಿಯನ್ನು 2020ರಲ್ಲಿ ಸೆನೆಗಲ್‌ನಿಂದ ಫ್ರಾನ್ಸ್ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಬೆಂಗಳೂರು ಕೇದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದು, ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದಾನೆ
ಅಬು ಸಲೇಂ
1993ರ ಬಾಂಬೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಅಬು ಸಲೇಂನನ್ನು 2005ರಲ್ಲಿ ಪೋರ್ಚುಗಲ್‌ನಿಂದ ಹಸ್ತಾಂತರಿಸಲಾಗಿದೆ. ಮರಣದಂಡನೆ ಅಥವಾ 25 ವರ್ಷಗಳಿಗೂ ಮೀರಿದ ಜೀವಾವಧಿ ಶಿಕ್ಷೆ ವಿಧಿಸುವುದಿಲ್ಲ ಎಂಬ ಭಾರತ ಸರ್ಕಾರದ ಭರವಸೆ ಮೇರೆಗೆ ಹಸ್ತಾಂತರಿಸಲಾಗಿದೆ.
ಜಿತೆದಾರ್ ಜಗ್ತಾರ್ ಸಿಂಗ್ ತಾರಾ(2015)ಚಿತ್ರಕೃಪೆ: X@AIR
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬೀಂಟ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಲ್ಲಿ ಥೈಲ್ಯಾಂಡ್‌ನಿಂದ ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಸದ್ಯ, ಬುರಾಲಿಯ ಮಾಡೆಲ್ ಜೈಲಿನಲ್ಲಿ ಜೀವಾಬಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಕ್ರಿಸ್ಟಿಯನ್ ಜೇಮ್ಸ್ ಮೈಕಲ್(2018):ಪಿಟಿಐ ಚಿತ್ರ
ಬ್ರಿಟನ್–ಇಟಲಿ ಸಂಸ್ಥೆ ಅಗಸ್ಟಾವೆಸ್ಟ್‌ಲ್ಯಾಂಡ್ ಜೊತೆಗಿನ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿದ್ದ ಜೇಮ್ಸ್‌ನನ್ನು 2018ರಲ್ಲಿ ಯುಎಇಯಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಅಂದಿನಿಂದ ಈತ ಕಸ್ಟಡಿಯಲ್ಲಿದ್ದಾನೆ.
ರಾಜೀವ್ ಸಕ್ಸೇನಾ(2019):ರಾಯಿಟರ್ಸ್ ಚಿತ್ರ
2019ರಲ್ಲಿ ದುಬೈನಿಂದ ಸಕ್ಸೇನಾ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಬಳಿಕ, ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಅಗಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಾದ 2ನೇ ಹೈಪ್ರೊಫೈಲ್ ಬಂಧನ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.