ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಸಹಿತ ಗಗನಯಾನ ಪರೀಕ್ಷಾರ್ಥ ಉಡಾವಣೆ 21ಕ್ಕೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

Published 10 ಅಕ್ಟೋಬರ್ 2023, 16:32 IST
Last Updated 10 ಅಕ್ಟೋಬರ್ 2023, 16:32 IST
ಅಕ್ಷರ ಗಾತ್ರ

ನವದೆಹಲಿ: ಮಾನವ ಸಹಿತ ಗಗನಯಾನಕ್ಕೆ ಮುನ್ನ ನಡೆಸಲು ಉದ್ದೇಶಿಸಿರುವ ಮೊದಲ ಪರೀಕ್ಷಾರ್ಥ ಉಡಾವಣೆ ಇದೇ 21ರಂದು ನೆರವೇರಿಸಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಮಂಗಳವಾರ ಹೇಳಿದ್ದಾರೆ.

ಮಾನವಸಹಿತ ಗಗನಯಾನಕ್ಕೂ ಮುನ್ನ ಮುಂದಿನ ವರ್ಷ ಮತ್ತೊಂದು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು. ‘ವ್ಯೋಮ ಮಿತ್ರ’ ಹೆಸರಿನ ಮಹಿಳಾ ರೊಬೋಟ್–ಗಗನಯಾನಿಯನ್ನು ಬಾಹ್ಯಾಕಾಶಕ್ಕೆ ಕಳಿಸಲಾಗುವುದು ಎಂದು ಹೇಳಿದರು.

ಚಂದ್ರಯಾನ–3 ಕಾರ್ಯಕ್ರಮದ ತಂಡವನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ‌ ಮಾತನಾಡಿದ ಅವರು, ಗಗನಯಾನಿಗಳು ಸುರಕ್ಷಿತವಾಗಿ ಭೂಮಿ ಬಂದ ಬಳಿಕ ಪಾರಾಗುವ ವ್ಯವಸ್ಥೆಯ ಪರೀಕ್ಷೆಯನ್ನು ಕೂಡ ಇಸ್ರೊ ನಡೆಸಲಿದೆ ಎಂದು ಹೇಳಿದರು.

ಗಗನಯಾನ ‘ಟಿವಿ–ಡಿ1’(ಟೆಸ್ಟ್‌ ವೆಹಿಕಲ್ ಡೆವಲೆಪ್‌ಮೆಂಟ್‌) ಬಾಹ್ಯಾಕಾಶನೌಕೆಯ ಉಡ್ಡಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.

ಗಗನಯಾನಿಗಳು ಭೂಮಿಗೆ ಮರಳುವಾಗ ಗಗನಯಾನಿಗಳನ್ನು ಹೊತ್ತ ಕ್ರ್ಯೂಮಾಡ್ಯೂಲ್‌ ಅಥವಾ ಕ್ಯಾಪ್ಸೂಲ್‌, ಭೂಮಿಯಿಂದ 11 ಕಿ.ಮೀ. ಎತ್ತರದಲ್ಲಿ ರಾಕೆಟ್‌ನಿಂದ ಬೇರ್ಪಡುತ್ತದೆ. ನಂತರ, ಈ ಕ್ಯಾಪ್ಸೂಲ್‌ಅನ್ನು ಬಂಗಾಳ ಕೊಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಸಲಾಗುತ್ತದೆ. ನಂತರ, ನೌಕಾಪಡೆ ಸಿಬ್ಬಂದಿ ಈ ಕ್ಯಾಪ್ಸೂಲ್‌ಅನ್ನು ತರುವರು.

‘ಈ ಪರೀಕ್ಷಾರ್ಥ ಉಡ್ಡಯನವು ಮಾನವರಹಿತ ಗಗನಯಾನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಿದ್ದು, ನಂತರ ಕೆಳ ಭೂಕಕ್ಷೆಯಲ್ಲಿ ಮಾನವಸಹಿತ ಗಗನಯಾನಕ್ಕೆ ಶಕ್ತಿ ತುಂಬಲಿದೆ. ಈ ಪರೀಕ್ಷಾರ್ಥ ಉಡಾವಣೆಗಳ ಯಶಸ್ಸಿನ ಆಧಾರದಲ್ಲಿ ಮುಂದಿನ ವರ್ಷಾಂತ್ಯಕ್ಕೆ ಮಾನವಸಹಿತ ಗಗನಯಾನ ಕಾರ್ಯಕ್ರಮವನ್ನು ಯೋಜಿಸಲಾಗುವುದು’ ಎಂದು ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದರು.

[object Object]
‘ಗಗನಯಾನ’ ಕಾರ್ಯಕ್ರಮದ ಮೊದಲ ಪರೀಕ್ಷಾರ್ಥ ಉಡಾವಣೆಗಾಗಿ ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರದಲ್ಲಿ ಸಿದ್ಧತೆ ನಡೆಯುತ್ತಿದೆ –ಪಿಟಿಐ ಚಿತ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT