ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿಪೀಡಿಯಾ’ ಲೋಕಾರ್ಪಣೆ ಮಾಡಿದ ಕೇಂದ್ರ ಸಚಿವ ಮೇಘವಾಲ್

Published 27 ಡಿಸೆಂಬರ್ 2023, 14:35 IST
Last Updated 27 ಡಿಸೆಂಬರ್ 2023, 14:35 IST
ಅಕ್ಷರ ಗಾತ್ರ

ಕೋಲ್ಕತ್ತ: ಮಹಾತ್ಮಾ ಗಾಂಧೀಜಿಯವರ ಜೀವನ, ತತ್ವ ಮತ್ತು ಬೋಧನೆಗಳ ಕುರಿತ ಎಐ ಆಧರಿತ ಭಂಡಾರವಾದ 'ಗಾಂಧಿಪೀಡಿಯಾ' ವೆಬ್ ಪೋರ್ಟಲ್ ಅನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಬುಧವಾರ ಇಲ್ಲಿ ಅನಾವರಣಗೊಳಿಸಿದರು.

ಈ ಸಂವಾದಾತ್ಮಕ ವೆಬ್ ಪೋರ್ಟಲ್, ಬಳಕೆದಾರರಿಗೆ ಸುಲಭ ಪ್ರವೇಶವನ್ನು ಖಚಿತಪಡಿಸುತ್ತದೆ ಎಂದು ಮೇಘವಾಲ್ ಹೇಳಿದರು.

‘ಗಾಂಧೀಪೀಡಿಯಾ’ವು ಯುವಜನತೆ ಮತ್ತು ಸಮಾಜವನ್ನು ಗಾಂಧಿ ಮೌಲ್ಯಗಳ ಬಗ್ಗೆ ಜಾಗೃತಗೊಳಿಸುತ್ತದೆ ಎಂಬ ಭರವಸೆಯನ್ನು ಕೇಂದ್ರ ಹೊಂದಿದೆ ಎಂದು ಅವರು ಹೇಳಿದರು.

ಗಾಂಧೀಜಿಯವರ ಬರಹಗಳ ಕುರಿತಾದ ಏಳು ಪ್ರಮುಖ ಪಠ್ಯಗಳು, ನೆಟ್‌ವರ್ಕ್ ಮ್ಯಾಪಿಂಗ್ ಪಾತ್ರಗಳು ಮತ್ತು ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ. 'ಗಾಂಧಿಪೀಡಿಯಾ' ಬಳಕೆದಾರರಿಗೆ ನಿರ್ದಿಷ್ಟ ಮಾಹಿತಿಯನ್ನು ಸೆಕೆಂಡುಗಳಲ್ಲಿ ಪಡೆಯಲು ಅನುಮತಿಸುತ್ತದೆ ಎಂದೂ ವಿವರಿಸಿದರು.

100 ಸಂಪುಟದ ಸಂಗ್ರಹದಲ್ಲಿ ಪ್ರಮುಖ ಪಠ್ಯಗಳು, ಪ್ರಮುಖ ವ್ಯಕ್ತಿಗಳು ಮತ್ತು ಐತಿಹಾಸಿಕವಾಗಿ ಮಹತ್ವದ ವ್ಯಕ್ತಿಗಳು ಮತ್ತು ಗಾಂಧಿಯವರ ಜೀವನವನ್ನು ರೂಪಿಸಿದ ಸ್ಥಳಗಳು, ಪತ್ರಗಳನ್ನು ಪ್ರದರ್ಶಿಸುವ ನ್ಯಾವಿಗೇಷನ್ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಗಾಂಧೀಜಿ ನಡೆದುಬಂದ ಹಾದಿ ಕುರಿತ 'ವರ್ಚುವಲ್ ಪ್ರದರ್ಶನ', ಫೋಟೊ ಮತ್ತು ವಿಡಿಯೊಗಳು ಹಾಗೂ 'ಲಾಸ್ಟ್ ಜರ್ನಿ'ಯಲ್ಲಿ ರಾಷ್ಟ್ರಪಿತನ ಕುರಿತು ಶಕ್ತಿಯುತ ದೃಶ್ಯ ನಿರೂಪಣೆಗಳನ್ನು ಕಾಣಬಹುದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಯೋಜನೆಯನ್ನು 2019ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.

ಕೃತಕ ಬುದ್ಧಿಮತ್ತೆ ಚಾಲಿತ ಈ ವೇದಿಕೆಯು ಕೇವಲ ಒಂದು ಭಂಡಾರವಲ್ಲ, ಮಹಾತ್ಮ ಗಾಂಧಿಜೀಯವರ ಜೀವನ ಮತ್ತು ಬೋಧನೆಗಳಲ್ಲಿ ತಲ್ಲೀನಗೊಳಿಸುವ ಪ್ರಯಾಣವಾಗಿದೆ ಎಂದು ನ್ಯಾಶನಲ್ ಕೌನ್ಸಿಲ್ ಫಾರ್ ಸೈನ್ಸ್ ಮ್ಯೂಸಿಯಂ(ಎನ್‌ಸಿಎಸ್‌ಎಂ) ಮಹಾನಿರ್ದೇಶಕ ಎ.ಡಿ. ಚೌಧರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT