ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯಿಂದ ಸ್ಫೂರ್ತಿ ಪಡೆದಿರುವ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ, ಕ್ಯಾಪ್ಟನ್ ಕೂಲ್ ಧೋನಿ ರೀತಿ ಆಗಲು ಬಯಸುವೆ ಎಂದಿದ್ದಾರೆ.

ಈ ತಿಂಗಳ 30ರಿಂದ ಆರಂಭವಾಗಲಿರುವ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ತಂಡ ಮುನ್ನಡೆಸಲು ಸಜ್ಜಾಗಿರುವ ಸನಾ, ದೊಡ್ಡ ಟೂರ್ನಿಗಳಲ್ಲಿ ತಂಡ ಮುನ್ನಡೆಸುವುದಕ್ಕೆ ಕೊಂಚ ಹಿಂಜರಿಕೆ ಇದ್ದೇ ಇರುತ್ತದೆ. ಆದರೆ, ಭಾರತ ತಂಡದ ಮಾಜಿ ನಾಯಕ ಧೋನಿಯಿಂದ ಸ್ಫೂರ್ತಿ ಪಡೆಯಲು ಯತ್ನಿಸುತ್ತೇನೆ ಎಂದಿದ್ದಾರೆ.

'ಭಾರತ ಮತ್ತು ಸಿಎಸ್ಕೆ ತಂಡಗಳ ನಾಯಕರಾಗಿ ಧೋನಿ ಮುನ್ನಡೆಸಿದ ಪಂದ್ಯಗಳನ್ನು ನೋಡಿದ್ದೇನೆ. ಮೈದಾನದಲ್ಲಿ ನಿರ್ಧಾರ ತೆಗೆದುಕೊಳ್ಳುವ ರೀತಿ, ಶಾಂತತೆ ಮತ್ತು ಅವರು ತಮ್ಮ ಆಟಗಾರರನ್ನು ಬೆಂಬಲಿಸುವ ರೀತಿಯಿಂದ ಕಲಿಯಲು ಬಹಳಷ್ಟು ಇದೆ. ನಾನು ನಾಯಕತ್ವದ ಜವಾಬ್ದಾರಿ ಪಡೆದಾಗ, ಧೋನಿಯಂತೆ ಆಗಬೇಕು ಎಂದು ಭಾವಿಸಿದ್ದೆ. ನಾನು ಅವರ ಸಂದರ್ಶನಗಳನ್ನು ಸಹ ನೋಡಿ ಬಹಳಷ್ಟು ಕಲಿತಿದ್ದೇನೆ‘ ಎಂದು ಸನಾ ಹೇಳಿದ್ದಾರೆ.

ಧೋನಿ 2020ರ ಆಗಸ್ಟ್ 15ರಂದು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು. ಫಾತಿಮಾ 2019ರ ಮೇ 6 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.

ಪಾಕಿಸ್ತಾನದೊಂದಿಗೆ ಭಾರತ ಮತ್ತು ಶ್ರೀಲಂಕಾ ವಿಶ್ವಕಪ್ ಆತಿಥ್ಯ ವಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.