ಗುರುವಾರ, 23 ಅಕ್ಟೋಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಎಲ್ಲಾ ವಿಷಯಗಳಲ್ಲಿಯೂ ಪ್ರಗತಿ ಕಾಣುವಿರಿ
Published 2 ಸೆಪ್ಟೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉದ್ಯೋಗ ಕ್ಷೇತ್ರದಲ್ಲಿ ಪರಿಚಯವಾಗಿ ಕುಟುಂಬ ಸದಸ್ಯರಂತೆ ಆಗಿ ಹೋದ ವ್ಯಕ್ತಿಗಳೊಂದಿಗೆ ಕಳೆದ ಸಮಯ ಸಂತೋಷವನ್ನುಂಟು ಮಾಡುವುದು. ರುದ್ರಾರಾಧನೆ ಶುಭ ಫಲ ನೀಡುವುದು.
ವೃಷಭ
ಕಾರ್ಯಕ್ಷೇತ್ರದಲ್ಲಿ ಶಕ್ತಿಯುತ ಅಧಿಕಾರ ಸ್ಥಾಪಿಸಲು ಅನುಕೂಲಕರ ಸಮಯ ನಿರ್ಮಾಣವಾಗಲಿದೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಸಮಯ ಉಳಿತಾಯವಾಗಲಿದೆ.
ಮಿಥುನ
ಪತ್ರಿಕಾ ವರದಿಗಾರರಿಂದ ತಪ್ಪುಗಳು ಸಂಭವಿಸುವ ಲಕ್ಷಣಗಳಿವೆ. ವಿಷಯವನ್ನು ಪರಾಮರ್ಶಿಸಿ ಸ್ಪಷ್ಟಪಡಿಸಿಕೊಂಡು ಪ್ರಕಟಿಸುವಲ್ಲಿ ಗಮನವಹಿಸಿ. ಮಾನಸಿಕವಾಗಿ ಉದ್ವೇಗ ಕಂಡುಬಂದೀತು.
ಕರ್ಕಾಟಕ
ಇನ್ನೊಬ್ಬರಿಗೆ ಮೋಸ ಮಾಡುವ ಮನಸ್ಥಿತಿಯನ್ನು ದೂರ ಮಾಡಿಕೊಳ್ಳಿ. ತಂದೆ ತಾಯಿ ಜತೆಗೆ ಕಿರು ತಿರುಗಾಟವನ್ನು ಕೈಗೊಳ್ಳಬೇಕಾದ ಅನಿವಾರ್ಯ ಎದುರಾಗಬಹುದು. ಧನಲಾಭದಿಂದ ಹರ್ಷವಾಗುವುದು.
ಸಿಂಹ
ಪಿತ್ತದೋಷದಿಂದ ನಾನಾರೀತಿಯ ಕಾಯಿಲೆಗೆ ಒಳಗಾದವರು ಆಯುರ್ವೇದದ ಮೊರೆಹೋಗಿ. ರಾಜಕೀಯ ವರ್ಗದವರು ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ. ಈ ದಿನ ಲಾಭದಾಯಕ.
ಕನ್ಯಾ
ಎಲ್ಲಾ ವಿಷಯಗಳಲ್ಲಿಯೂ ಪ್ರಗತಿ ಕಾಣುವಿರಿ. ಯಾವುದೇ ಕೆಲಸಗಳಿಗೂ ಅಳುಕುವ ಪ್ರಮೇಯ ಇರುವುದಿಲ್ಲ. ಹಿರಿಯರ ಆಶೀರ್ವಾದ ಪಡೆಯುವಿರಿ. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಮುಂದುವರಿಯಲಿದೆ.
ತುಲಾ
ಕಾರ್ಯದೊತ್ತಡ ಜತೆಯಲ್ಲಿಯೂ ಮನೆಯ ವಿಚಾರಗಳತ್ತ ಗಮನಹರಿಸಿ. ಕಚೇರಿಯಲ್ಲಿ ಬೇಸರ ತರುವಂಥ ಘಟನೆಗಳು ನಡೆದರೂ ಧೃತಿಗೆಡದೆ ಸಮಾಧಾನದಿಂದಿರಿ.
ವೃಶ್ಚಿಕ
ಪ್ರಯತ್ನಿಸಿದ ಕಾರ್ಯಗಳು ಆಪ್ತರ ಸಕಾಲಿಕ ನೆರವಿನಿಂದ ಕೈಗೂಡುವುದು. ನೂತನ ವಸ್ತುಗಳ ಖರೀದಿಗೆ ಸಮಯವಲ್ಲ. ಮೂಕಾಂಬಿಕೆಯನ್ನು ಧ್ಯಾನಿಸಿ ಅಭೀಷ್ಟ ನೆರವೇರುವುದು.
ಧನು
ಬುದ್ಧಿ ಬಲದಿಂದ ವಿವಿಧ ಕಾರ್ಯಗಳು ಫಲಿತಗೊಂಡು, ಅನಿರೀಕ್ಷಿತ ವೆಂಬಂತೆ ಉತ್ತಮ ಅಭಿವೃದ್ಧಿ ನಿಮ್ಮದಾಗಲಿದೆ. ರೈತರಿಗೆ ವಿಪರೀತ ಕೆಲಸಗಳಿಂದ ದೇಹಾಲಸ್ಯ ತೋರಿ ವಿಶ್ರಾಂತಿ ಬಯಸುವಿರಿ.
ಮಕರ
ಕ್ರೀಡಾಪಟುಗಳು ಛಲ ಬಿಡದೆ ಪರಿಶ್ರಮ ವಹಿಸಿದ್ದಕ್ಕಾಗಿ ಉತ್ತಮ ಅವಕಾಶಗಳೊಂದಿಗೆ ಉತ್ತಮ ಮಾರ್ಗದರ್ಶಕರು ದೊರೆತು ಜಯದ ಪಥದಲ್ಲಿ ನಡೆಯುವಿರಿ. ನ್ಯಾಯಾಲಯದ ವಿಚಾರಣೆಗಳಲ್ಲಿ ಜಯ.
ಕುಂಭ
ಸ್ನೇಹಿತನ ವಿಷಯದಲ್ಲಿ ಆಸಕ್ತಿಯನ್ನು ವಹಿಸುವುದು ಸರಿಯಲ್ಲ. ಜವಾ ಬ್ದಾರಿಯಲ್ಲಿನ ಸ್ಪಷ್ಟ ವಿಷಯವೊಂದು ಮನವರಿಕೆಯಾಗುವುದು. ಆದಾಯ ಸ್ಥಿರವಾಗಿ ಇರುವುದು. ಹಣಕಾಸಿನ ಕೊರತೆ ಇರುವುದಿಲ್ಲ.
ಮೀನ
ಯಾರ ಪರ ವಹಿಸದಿದ್ದರೂ ವಿಚಾರವನ್ನು ತಿಳಿಯದೆ ಮುಂದುವರಿಯಬೇಡಿ. ಜನತಾ ನಿರ್ಧಾರವನ್ನು ಅರಿಯದೆ ರಾಜಕೀಯ ನಾಯಕರು ಇಟ್ಟ ತಪ್ಪು ಹೆಜ್ಜೆಯು ನಿಂದನೆಗೊಳಗಾಗುವ ಸಾಧ್ಯತೆಗಳಿವೆ.
ADVERTISEMENT
ADVERTISEMENT