ಗುವಾಹಟಿ: ‘ಪಾಕಿಸ್ತಾನಿ ಪ್ರಜೆಯೊಂದಿಗೆ ತಮಗೆ ನಂಟಿರುವುದಾಗಿ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ‘ಇದು ಬುದ್ಧಿ ಇಲ್ಲದ ಮತ್ತು ಬೋಗಸ್ ಆರೋಪ’ ಎಂದಿದ್ದಾರೆ.

‘ಮುಖ್ಯಮಂತ್ರಿಯವರ ಸುದ್ದಿಗೋಷ್ಠಿ ಸಿ–ಗ್ರೇಡ್ ಸಿನಿಮಾಕ್ಕಿಂತಲೂ ಕಳಪೆಯಾಗಿದೆ. ಇದೊಂದು ಸೂಪರ್ ಪ್ಲಾಪ್ ಪ್ರಯತ್ನ’ ಎಂದು ಗೌರವ್ ಗೊಗೊಯ್ ಅವರು ‘ಎಕ್ಸ್’ನಲ್ಲಿ ದೂರಿದ್ದಾರೆ.

‘ಶತಮಾನದಲ್ಲೇ ಅತ್ಯಂತ ವಿಫಲವಾದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ದೆಹಲಿ ಮತ್ತು ಅಸ್ಸಾಂನ ಪತ್ರಕರ್ತರ ಬಗ್ಗೆ ನನಗೆ ವಿಷಾದವಿದೆ. ರಾಜಕೀಯ ಚಾಣಾಕ್ಷ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುವವರು, ಅತ್ಯಂತ ಬುದ್ಧಿಹೀನ ಮತ್ತು ನಕಲಿ ಅಂಶಗಳನ್ನು ನೀಡಿದ್ದಾರೆ’ ಎಂದು ಅವರು
ಹೇಳಿದ್ದಾರೆ.

ಶರ್ಮಾ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗಲೇ ’ಎಕ್ಸ್‘ ಮೂಲಕ ಸಂದೇಶ ನೀಡಿದ ಗೌರವ್ ಗೊಗೊಯ್, ’ಇದು ಶತಮಾನದ ವಿಫಲ ಪ್ರಹಸನ‘ ಎಂದು ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.