ಪಣಜಿ: ಉತ್ತರ ಗೋವಾದ ನೈಟ್ ಕ್ಲಬ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಸಹೋದರರನ್ನು ಬಂಧಿಸಿರುವ ಗೋವಾ ಪೊಲೀಸರು, ಬುಧವಾರ ಬೆಳಿಗ್ಗೆ ಮಾಪುಸಾ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಅವರನ್ನು ಕೋರ್ಟ್ಗೆ ಹಾಜರುಪಡಿಸಿದರು. ಕೋರ್ಟ್ ಇಬ್ಬರನ್ನೂ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

‘ಪೊಲೀಸ್ ಕಸ್ಟಡಿಗೆ ವಹಿಸುವ ಮುನ್ನ ತಮ್ಮ ಹದಗೆಟ್ಟಿರುವ ಆರೋಗ್ಯ ಸ್ಥಿತಿಯನ್ನು ವಿಶೇಷವಾಗಿ ಪರಿಗಣಿಸಬೇಕು’ ಎಂದು ಲೂಥ್ರಾ ಸಹೋದರರು ಕೋರ್ಟ್ಗೆ ಮನವಿ ಮಾಡಿದರು. ಇದರಿಂದ ಅವರನ್ನು ಎರಡನೆಯ ಬಾರಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಕೋರ್ಟ್ ಸೂಚಿಸಿತು. ಪೊಲೀಸರು ಅವರನ್ನು ಮತ್ತೆ ಮಾಪುಸಾ ಜಿಲ್ಲಾ ಆಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಿದರು.

ನೈಟ್ ಕ್ಲಬ್ ಅಗ್ನಿ ಅವಘಡದಲ್ಲಿ ತಮ್ಮ ಕುಟುಂಬದ ನಾಲ್ವರನ್ನು ಕಳೆದುಕೊಂಡ ಭಾವನಾ ಜೋಶಿ ಅವರ ಪರವಾಗಿ ಹಾಜರಾದ ವಕೀಲ ವಿಷ್ಣು ಜೋಶಿ ಅವರು, ‘ಲೂಥ್ರಾ ಸಹೋದರರನ್ನು ಎರಡನೆಯ ಬಾರಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗಲೂ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಈ ಪ್ರಕರಣದ ಗಂಭೀರತೆ ಪರಿಗಣಿಸಿ ಕೋರ್ಟ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ತಮಗೆ ಒಳ್ಳೆಯ ಹಾಸಿಗೆ ಒದಗಿಸುವಂತೆ ಅವರು ಸಲ್ಲಿಸಿದ್ದ ಮನವಿಯನ್ನೂ ಕೋರ್ಟ್ ತಿರಸ್ಕರಿಸಿದೆ’ ಎಂದರು.

ಡಿಸೆಂಬರ್ 6ರಂದು ನೈಟ್ಕ್ಲಬ್ನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 25 ಮಂದಿ ಮೃತಪಟ್ಟಿದ್ದರು. ಘಟನೆ ಬೆನ್ನಲ್ಲೇ ಇಬ್ಬರು ಸಹೋದರರು ಥಾಯ್ಲೆಂಡ್ಗೆ ಪರಾರಿಯಾಗಿದ್ದರು. ಭಾರತದ ಮನವಿಯ ಮೇರೆಗೆ ಥಾಯ್ಲೆಂಡ್ ಪೊಲೀಸರು ಡಿ. 11ರಂದು ಫುಕೆಟ್ನಲ್ಲಿ ಆರೋಪಿಗಳನ್ನು ಬಂಧಿಸಿದ್ದರು. ಥಾಯ್ಲೆಂಡ್ನಿಂದ ಭಾರತಕ್ಕೆ ಹಸ್ತಾಂತರಿಸಲಾದ ಲೂಥ್ರಾ ಸಹೋದರನ್ನು ಗೋವಾ ಪೊಲೀಸರು ಮಂಗಳವಾರ ದೆಹಲಿಯಲ್ಲಿ ಬಂಧಿಸಿ ಗೋವಾಕ್ಕೆ ಕರೆತಂದಿದ್ದರು.

ಕೊಲೆ ಎಂದು ಪರಿಗಣಿಸಲಾಗದ ಮಾನವ ಹತ್ಯೆ ಸೇರಿದಂತೆ ವಿವಿಧ ಆರೋಪಗಳಡಿ ಉತ್ತರ ಗೋವಾದ ಅಂಜನಾ ಠಾಣೆಯಲ್ಲಿ ಲೂಥ್ರಾ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.