ಡಾರ್ಗಾನ್ : ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಲಚಿತ್ ಬರ್ಫುಕನ್ ಪೋಲಿಸ್ ಅಕಾಡೆಮಿಯಲ್ಲಿ ಗೋವಾದ 700 ಪೊಲೀಸರು ಪ್ರಾಥಮಿಕ ಹಂತದ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ಪ್ರಾಥಮಿಕ ಹಂತದ ತರಬೇತಿಯಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆ, ಕ್ಷೇತ್ರ ತಂತ್ರಗಳು ಹಾಗೂ ಶಸ್ತ್ರಾಸ್ತ್ರ ನಿರ್ವಹಣೆಯ ಕಠಿಣ ತರಬೇತಿಯನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಶಿಕ್ಷಣಾರ್ಥಿಗಳು 43 ವಾರಗಳ ಕಠಿಣ ತರಬೇತಿಯನ್ನು ಪಡೆಯಲು ಕಳೆದ ವರ್ಷ ಅಕ್ಟೋಬರ್ 4 ರಂದು ಇಲ್ಲಿಗೆ ಆಗಮಿಸಿದ್ದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತರಬೇತಿಯ 1ನೇ, 2ನೇ ಮತ್ತು 3ನೇ ಪೆರೇಡ್ನಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಅಕಾಡೆಮಿಯ ಐತಿಹಾಸಿಕ ತಂಡವಾಗಿದ್ದು, ಅಸ್ಸಾಂ, ಮಣಿಪುರ ಹಾಗೂ ಗೋವಾ ಪೊಲೀಸರು ಒಟ್ಟಿಗೆ ತರಬೇತಿ ಪಡೆದಿದ್ದಾರೆ. ಇದು ಅಂತರ-ರಾಜ್ಯ ಸೌಹಾರ್ದತೆ ಹಾಗೂ ವೃತ್ತಿಪರ ವಿನಿಮಯವನ್ನು ಬೆಳೆಸುತ್ತದೆ ಎಂದು ಹೇಳಿದರು.

ಅಸ್ಸಾಂನಲ್ಲಿ‘ಪ್ಯಾಂಥರ್ಸ್ ಆನ್ ವೀಲ್ಸ್’ ಘಟಕದಿಂದ ತರಬೇತಿ ಪಡೆದ ಪೊಲೀಸರಿಗೆ ನಿರ್ಗಮನ ಪಥಸಂಚಲನದಲ್ಲಿ ಪ್ರಮಾಣ ವಚನ ಭೋಧಿಸಿ ಬಹುಮಾನ ವಿತರಿಸಿದರು.

ಈ ಅಕಾಡಮಿಯನ್ನು ದೇಶದ ಅತ್ಯುತ್ತಮ ಪೊಲೀಸ್ ತರಬೇತಿ ಕೇಂದ್ರವಾಗಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲ ಹಂತದ ನಿರ್ಮಾಣ ಕಾರ್ಯಕ್ಕೆ ಮಾರ್ಚ್ ನಲ್ಲಿ ಚಾಲನೆ ನೀಡಿದ್ದು ಮುಂದಿನ ಹಂತಕ್ಕೆ ಶಂಕು ಸ್ಥಾಪನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.