ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತಿ: ಮಹಿಳೆಯ ಖಾಸಗಿ ವಿಡಿಯೊ ಪೋಸ್ಟ್ ಮಾಡಿದ ಆರೋಪಿ

Published 1 ಜೂನ್ 2024, 9:50 IST
Last Updated 1 ಜೂನ್ 2024, 9:50 IST
ಅಕ್ಷರ ಗಾತ್ರ

ಪಣಜಿ: ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯೊಬ್ಬರ ಅಶ್ಲೀಲ ವಿಡಿಯೊವನ್ನು ಪೋಸ್ಟ್ ಮಾಡಿದ ಆರೋಪದಡಿ 20 ವರ್ಷದ ಯುವಕನನ್ನು ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯನ್ನು ದಕ್ಷಿಣ ಗೋವಾದ ಕೆನಕೋನಾ ತಾಲೂಕಿನ ನಿವಾಸಿ ವಿನಯ್ ಗಾಂವ್ಕರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿದ್ದಾರೆ. ಬಳಿಕ ಮಡಗಾಂವ್ ಪಟ್ಟಣದ ಮಹಿಳೆಯೊಂದಿಗೆ ಸ್ನೇಹ ಬೆಳಸಿದ್ದಾನೆ. ಇವರಿಬ್ಬರ ನಡುವೆ ವಿಡಿಯೊ ಸೇರಿದಂತೆ ಚಾಟ್‌ಗಳು ವಿನಿಮಯಗೊಂಡಿದೆ. ಕೆಲ ದಿನಗಳ ಬಳಿಕ ಆರೋಪಿಯು ಆಕೆಯ ಖಾಸಗಿ ಪೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ ನಂತರ ಆಕೆಗೆ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಸೈಬರ್ ಕ್ರೈಮ್) ರಾಹುಲ್ ಗುಪ್ತಾ ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆಯ ದೂರಿನ ಮೇರೆಗೆ ಸೈಬರ್ ಕ್ರೈಮ್ ಪೊಲೀಸರು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಐಟಿ ವಿದ್ಯಾರ್ಥಿಯಾಗಿರುವ ಆರೋಪಿಯು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಗುಪ್ತಾ ಹೇಳಿದ್ದಾರೆ.

ಆರೋಪಿಯ ಮೊಬೈಲ್‌ನಲ್ಲಿದ್ದ ಸಂತ್ರಸ್ತೆಯ ವಿಡಿಯೊ ಚಾಟ್‌ ಹಾಗೂ ಖಾಸಗಿ ಪೋಟೊಗಳನ್ನು ವಶಪಡಿಸಿಕೊಂಡಿದ್ದು, ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಬೆಳಸುವ ಮುನ್ನ ಮಹಿಳೆಯರು ಎಚ್ಚರವಹಿಸಬೇಕು. ನಕಲಿ ಖಾತೆಗಳ ಮೂಲಕ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು ಜನರು ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT