ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Exit Poll Results 2024: ನರೇಂದ್ರ ಮೋದಿ ಸರ್ಕಾರಕ್ಕೆ ಹ್ಯಾಟ್ರಿಕ್ ಗೆಲುವು?

Published 1 ಜೂನ್ 2024, 9:19 IST
Last Updated 1 ಜೂನ್ 2024, 16:08 IST
ಅಕ್ಷರ ಗಾತ್ರ
14:1701 Jun 2024

ಮತಚಲಾವಣೆಯ ಅವಧಿ ಮುಗಿಯುತ್ತದ್ದಂತೆ ವಿವಿಧ ವಿದ್ಯುನ್ಮಾನ ಮಾಧ್ಯಮಗಳು ಸಂಸ್ಥೆಗಳೊಂದಿಗೆ ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟುಗೊಂಡಿದ್ದು, ದೇಶದ ಮತದಾರರು ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷವನ್ನು ಗದ್ದುಗೆಯ ಸನಿಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದೇ ಹೇಳಿವೆ.

09:1701 Jun 2024

ಮತಗಟ್ಟೆ ಸಮೀಕ್ಷೆಯತ್ತ ಚಿತ್ತ

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಗೆ ಇಂದು ತೆರೆಬೀಳಲಿರುವುದರಿಂದ ಎಲ್ಲರ ಗಮನ ಮತಗಟ್ಟೆ ಸಮೀಕ್ಷೆಯತ್ತ ನೆಟ್ಟಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಮಾಧ್ಯಮಗಳು ಜೂನ್‌ 1ರ ಸಂಜೆ 6.30ರ ಬಳಿಕ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ಪ್ರಸಾರ ಮಾಡಬಹುದಾಗಿದೆ.

09:2201 Jun 2024

ಮತದಾನ ಕುರಿತು ಚರ್ಚೆಗಳಲ್ಲಿ ಭಾಗವಹಿಸಲ್ಲ: ಕಾಂಗ್ರೆಸ್

ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಕುರಿತ ಸುದ್ದಿ ವಾಹಿನಿಗಳ ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ಪಕ್ಷವು ನಿರ್ಧರಿಸಿದೆ.

10:5201 Jun 2024

2014, 2019ರ ಮತಗಟ್ಟೆ ಸಮೀಕ್ಷೆಗಳೆಷ್ಟು ನಿಜವಾಗಿದ್ದವು?

Exit Polls: 2019 ಹಾಗೂ 2014ರ ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳು ವಾಸ್ತವಿಕ ಫಲಿತಾಂಶಕ್ಕೆ ಎಷ್ಟು ದೂರ ಅಥವಾ ಎಷ್ಟು ಹತ್ತಿರವಾಗಿದ್ದವು ಎಂಬ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

11:3001 Jun 2024

ಮತಗಟ್ಟೆ ಸಮೀಕ್ಷೆ ಕುರಿತ ಚರ್ಚೆಯಲ್ಲಿ ಭಾಗವಹಿಸಲು 'ಇಂಡಿಯಾ' ಮೈತ್ರಿಕೂಟ ನಿರ್ಧಾರ

ಮತಗಟ್ಟೆ ಸಮೀಕ್ಷೆ ಕುರಿತ ಇಂದು ನಡೆಯಲಿರುವ ಟೆಲಿವಿಷನ್ ಚರ್ಚೆಯಲ್ಲಿ ಭಾಗವಹಿಸಲು 'ಇಂಡಿಯಾ' ಮೈತ್ರಿಕೂಟ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ. ಪರ ಹಾಗೂ ವಿರುದ್ಧ ಅಂಶಗಳನ್ನು ಪರಿಗಣಿಸಿದ ಬಳಿಕ ಬಿಜೆಪಿಯನ್ನು ಬಯಲು ಮಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಪವನ್ ಖೇರಾ ಹೇಳಿದ್ದಾರೆ.

12:5301 Jun 2024

ಲೋಕಸಭೆಗೆ ನಡೆದ ಏಳನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮತಗಟ್ಟೆ ಸಮೀಕ್ಷೆ ಹೊರಬೀಳಲಿದೆ. ಅಧಿಕಾರ ಯಾರಿಗೆ ಸಿಗಲಿದೆ ಎಂಬುದು ಕುತೂಹಲವೆನಿಸಿದೆ. ಇದು ಎಷ್ಟು ನಿಜವಾಗಲಿದೆ ಎಂಬುದನ್ನು ತಿಳಿಯಬೇಕಾದರೆ ಜೂನ್ 4ರವರೆಗೆ ಕಾಯಬೇಕಿದೆ.

13:0901 Jun 2024

ಇಂಡಿಯಾಟುಡೇ-ಆ್ಯಕ್ಸಿಸ್ ಪ್ರಕಾರ ಇಂಡಿಯಾ ಮೈತ್ರಿಕೂಟ ತಮಿಳುನಾಡಿನಲ್ಲಿ 33ರಿಂದ 37 ಮತ್ತು ಎನ್‌ಡಿಎ 2ರಿಂದ 4 ಸ್ಥಾನಗಳಲ್ಲಿ ಗೆಲ್ಲಲಿದೆ.

13:1601 Jun 2024

ನ್ಯೂಸ್ ಡಿ ಡೈನಾಮಿಕ್ಸ್ - ಎನ್‌ಡಿಎಗೆ ಸ್ಪಷ್ಟ ಬಹುಮತ

ನ್ಯೂಸ್ ಡಿ ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ 371 ಸ್ಥಾನಗಳಲ್ಲಿ ಗೆಲುವು ಗಳಿಸಿದ್ದು, ಮತ್ತೆ ಅಧಿಕಾರಕ್ಕೆ ಬರಲಿದೆ. ಇಂಡಿಯಾ ಮೈತ್ರಿಕೂಟ ಕೇವಲ 125 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವರದಿ ಹೇಳಿದೆ.

13:1701 Jun 2024

ಜನ್ ಕೀ ಬಾತ್

ಎನ್‌ಡಿಎ: 377

ಇಂಡಿಯಾ: 151

ಇತರೆ: 15

13:1701 Jun 2024

ಮಾಟ್ರೈಝ್

ಎನ್‌ಡಿಎ: 352-368

ಇಂಡಿಯಾ: 118-133

ಇತರೆ: 43-48