ಪಟ್ನಾ: ಬಿಹಾರದ ಜಮೂಯಿ ಜಿಲ್ಲೆಯಲ್ಲಿ ಸರಕು ಸಾಗಣೆ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿದ್ದು, ಹೌರಾ - ಪಟ್ನಾ ಹಾಗೂ ದೆಹಲಿ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ.

ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ರೈಲ್ವೆಯ ಅಸನ್ಸೋಲ್ ವಿಭಾಗದ ಲಹಬೋನ್ ಮತ್ತು ಸಿಮುಲ್ತಾಲಾ ನಿಲ್ದಾಣಗಳ ನಡುವೆ ಶನಿವಾರ ರಾತ್ರಿ 11.25 ರ ಸುಮಾರಿಗೆ ಅವಘಡವಾಗಿದೆ. ಇದರಿಂದಾಗಿ, ರಾತ್ರಿಯಿಡೀ 20ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಸನ್ಸೋಲ್, ಮಧುಪುರ ಹಾಗೂ ಝಝಾ ನಿಲ್ದಾಣಗಳಿಂದ ಕಾರ್ಯಾಚರಣೆ ರೈಲುಗಳನ್ನು ಕಳುಹಿಸಲಾಗಿದೆ. ಹಳಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿ ಎಂಟು ಆನೆಗಳು ಸಾವಿಗೀಡಾಗಿದ್ದವು.

ಡಿಸೆಂಬರ್ 20ರ ತಡರಾತ್ರಿ ಹಳಿ ದಾಟುತ್ತಿದ್ದ ಆನೆಗಳಿಗೆ ಸಾಯಿರಂಗ್–ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿತ್ತು. ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಒಂದು ಆನೆ ಮರುದಿನ ಮೃತಪಟ್ಟಿತ್ತು.

ಡಿಕ್ಕಿ ರಭಸಕ್ಕೆ ಐದು ಬೋಗಿಗಳು ಹಳಿ ತಪ್ಪಿದ್ದವು. ಘಟನೆಯ ಬೆನ್ನಲ್ಲೇ, ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು.
.ಅಸ್ಸಾಂ | ಎಕ್ಸ್ಪ್ರೆಸ್ ರೈಲು ಡಿಕ್ಕಿ: 7 ಆನೆಗಳು ಸ್ಥಳದಲ್ಲೇ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.