ಭಾನುವಾರ, 21 ಡಿಸೆಂಬರ್ 2025
×
ADVERTISEMENT
ADVERTISEMENT

ಅಸ್ಸಾಂ | ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: 7 ಆನೆಗಳು ಸ್ಥಳದಲ್ಲೇ ಸಾವು

Published : 20 ಡಿಸೆಂಬರ್ 2025, 4:16 IST
Last Updated : 20 ಡಿಸೆಂಬರ್ 2025, 4:16 IST
ಫಾಲೋ ಮಾಡಿ
Comments
ಘಟನೆ ವಿವರ 
ರೈಲು ಡಿಕ್ಕಿ ಹೊಡೆದು ನಾಲ್ಕು ಮರಿಯಾನೆಗಳು ಸೇರಿ ಏಳು ಆನೆಗಳು ಮೃತಪಟ್ಟಿರುವುದು ನೋವಿನ ಸಂಗತಿ. ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಅರಣ್ಯ ಇಲಾಖೆಗೆ ಆದೇಶಿಸಿದ್ದೇನೆ.
– ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ಮುಖ್ಯಮಂತ್ರಿ  (‘ಎಕ್ಸ್‌’ ಪೋಸ್ಟ್‌ನಲ್ಲಿ)
ಅಪಘಾತ ಸಂಭವಿಸಿದ ಸ್ಥಳವು ಆನೆ ಕಾರಿಡಾರ್‌ ವ್ಯಾಪ್ತಿಗೆ ಸೇರುವುದಿಲ್ಲ. ಆನೆ ಹಿಂಡನ್ನು ನೋಡಿದ ಕೂಡಲೇ ಲೊಕೊ ಪೈಲಟ್‌ ತುರ್ತು ಬ್ರೇಕ್‌ ಹಾಕಿದ್ದಾರೆ. ಆದರೂ ದುರ್ಘಟನೆ ಸಂಭವಿಸಿದೆ
ಕಪಿಂಜಲ್‌ ಕಿಶೋರ್‌ ಶರ್ಮಾ ಈಶಾನ್ಯ ಗಡಿ ರೈಲ್ವೆ (ಎನ್‌ಎಫ್‌ಆರ್‌) ವಕ್ತಾರ 
ರಾಜ್ಯದಲ್ಲಿ ಮಾನವ–ವನ್ಯಜೀವಿ ಸಂಘರ್ಷದ ಸವಾಲು ಹೆಚ್ಚುತ್ತಿರುವುದನ್ನು ಈ ಘಟನೆ ಒತ್ತಿ ಹೇಳಿದೆ. ನೈಸರ್ಗಿಕ ಆವಾಸ ಸ್ಥಾನ ಕಡಿಮೆಯಾಗುತ್ತಿರುವುದು ಕಳವಳಕಾರಿ 
–ಗೌರವ್ ಗೊಗೊಯಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ 
ಕರಗುತ್ತಿರುವ ಹಸಿರು; ಹೆಚ್ಚುತ್ತಿರುವ ಸಂಘರ್ಷ
ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ನಿಲುವುಗಳಿಂದ ಹಸಿರು ಕರಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದ್ದು ವನ್ಯಜೀವಿಗಳ ನೈಸರ್ಗಿಕ ಆವಾಸಕ್ಕೆ ಕಂಟಕ ಎದುರಾಗಿದೆ. ಆನೆಗಳ ಸಾಂಪ್ರದಾಯಿಕ ವಲಸೆ ಮಾರ್ಗ ಬದಲಾಗಿದೆ. ಇದು ಪರಿಸರ ಸಂರಕ್ಷಣೆ ಬಗ್ಗೆ ಸರ್ಕಾರಕ್ಕಿರುವ ಕನಿಷ್ಠ ಬದ್ಧತೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.  ‘ದೂರದೃಷ್ಟಿ ಮತ್ತು ಹೊಣೆಗಾರಿಕೆ ಕೊರತೆಯಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಅಭಿವೃದ್ಧಿ ನೀತಿಗಳು ಅಲ್ಪಾವಧಿ ಲಾಭಕ್ಕಿಂತ ಜನರು ಮತ್ತು ಪರಿಸರವನ್ನು ಕೇಂದ್ರೀಕರಿಸಿರಬೇಕು. ಆದರೆ ಈ ವ್ಯವಸ್ಥೆಯಲ್ಲಿನ ಅಸಮತೋಲನದಿಂದ ಅಸ್ಸಾಂನಲ್ಲಿ ಪರಿಸರಕ್ಕೆ ಹೆಚ್ಚಿನ ಹಾನಿ ಆಗುತ್ತಿದೆ. ಮಾನವ –ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ’ ಎಂದು  ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT