ನವದೆಹಲಿ: ಭಾರತ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಆಚರಿಸುತ್ತಿದೆ. ಟೆಕ್ ದೈತ್ಯ ಗೂಗಲ್ ವಿಶೇಷ ಡೂಡಲ್ ಮೂಲಕ ಸ್ವಾತಂತ್ರ್ಯ ದಿನಕ್ಕೆ ಶುಭ ಕೋರಿದೆ.

ಡಿಜಿಟಲ್ ಕಲಾಕೃತಿಯಲ್ಲಿ ಭಾರತದ ಸಾಧನೆಯನ್ನು ಚಿತ್ರೀಕರಿಸಿದೆ. ಬಾಹ್ಯಾಕಾಶ ಯಾನ, ಚೆಸ್, ಸಿನಿಮಾ ಕ್ಷೇತ್ರದಲ್ಲಿನ ಸಾಧನೆ ಸೇರಿ ಒಟ್ಟು ಆರು ರೀತಿಯ ಚಿತ್ರಗಳಲ್ಲಿ ಡೂಡಲ್ ರಚಿಸಲಾಗಿದೆ.

GOOGLE ಎನ್ನುವ ಅಕ್ಷರವನ್ನು ಭಾರತದ ವಿವಿಧ ಪ್ರದೇಶಗಳ ಆರು ವಿನ್ಯಾಸದ ಬಿಲ್ಲೆಗಳ ಮೇಲೆ ಚಿತ್ರಿಸಲಾಗಿದೆ. ಜೈಪುರದ ನೀಲಿ ಬಣ್ಣಗಳ ಕುಂಬಾರಿಕೆಯಿಂದ ಹಿಡಿದು ಪಶ್ಚಿಮ ಬಂಗಾಳದ ಟೆರಾಕೋಟಾ ವಿನ್ಯಾಸದವರೆಗೆ ಬಿಲ್ಲೆಗಳ ಮೇಲೆ GOOGLE ನ ಆರು ಅಕ್ಷರಗಳನ್ನು ನಮೂದಿಸಲಾಗಿದೆ.

ಬೂಮ್ರಾಂಗ್ ಸ್ಟುಡಿಯೋದ ಕಲಾವಿದ ಮಕರಂದ್ ನರ್ಕರ್ ಮತ್ತು ಸೋನಾಲ್ ವಾಸವೆ ಅವರು ಈ ಡೂಡಲ್ ತಯಾರಿಸಿರುವುದಾಗಿ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.