ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಪ್ರವಾಹ: ಗೂಗಲ್ ಸರ್ಚ್‌ನಲ್ಲಿ ಕ್ರೈಸಿಸ್ ಅಲರ್ಟ್, ಮ್ಯಾಪ್ ಅಪ್‌ಡೇಟ್

ಅಕ್ಷರ ಗಾತ್ರ

ಬೆಂಗಳೂರು: ಪ್ರವಾಹ ಪೀಡಿತ ಅಸ್ಸಾಂನಲ್ಲಿ ಜನರ ಅನುಕೂಲಕ್ಕಾಗಿ ಗೂಗಲ್ ವಿಶೇಷ ಅಲರ್ಟ್ ಸೇವೆಗಳನ್ನು ಆರಂಭಿಸಿದೆ.

ಗೂಗಲ್ ಸರ್ಚ್ ಮತ್ತು ಮ್ಯಾಪ್‌ನಲ್ಲಿ ತುರ್ತು ಅಲರ್ಟ್, ಸಮಸ್ಯೆಯಾಗಿದ್ದಲ್ಲಿ ವರದಿ ಮಾಡುವ ಮತ್ತು ಅಗತ್ಯ ಸೇವೆಗಳನ್ನು ಪಡೆದುಕೊಳ್ಳುವ ಕುರಿತಂತೆ ಮಾಹಿತಿ ನೀಡಲಾಗಿದೆ.

ಸ್ಥಳೀಯ ಸಂಸ್ಥೆಗಳು, ಸರ್ಕಾರ, ಆಧಿಕಾರಿಗಳು ಮತ್ತು ಅಧಿಕೃತ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಗೂಗಲ್ ಜನತೆಗೆ ಒದಗಿಸುತ್ತಿದೆ.

ಪ್ರವಾಹ ಪೀಡಿತ ಪ್ರದೇಶಗಳ ಜನರು ಯಾವುದೇ ರೀತಿಯ ಅಗತ್ಯ ಸೇವೆ ಬಯಸಿದರೂ, ಅವರಿಗೆ ನೆರವಿನ ಜತೆಗೆ, ಆ ಪ್ರದೇಶದಲ್ಲಿನ ಶಿಬಿರಗಳು ಮತ್ತು ಔಷಧ ಕೇಂದ್ರ, ವೈದ್ಯರ ಲಭ್ಯತೆ ಮತ್ತು ಆಹಾರದ ಕುರಿತು ಮಾಹಿತಿ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT