ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾ: ಐದು ವರ್ಷ ಕಾಲ ಎನ್ಎಲ್‌ಎಫ್‌ಟಿ, ಎಟಿಟಿಎಫ್‌ ನಿಷೇಧಿಸಿ ಕೇಂದ್ರ ಆದೇಶ

Published 3 ಅಕ್ಟೋಬರ್ 2023, 16:01 IST
Last Updated 3 ಅಕ್ಟೋಬರ್ 2023, 16:01 IST
ಅಕ್ಷರ ಗಾತ್ರ

ನವದೆಹಲಿ: ತ್ರಿಪುರಾವನ್ನು ಭಾರತದಿಂದ ಪ್ರತ್ಯೇಕಗೊಳಿಸಿ ಸ್ವತಂತ್ರ ರಾಷ್ಟ್ರವಾಗಿಸಲು ಯತ್ನಿಸುತ್ತಿವೆ ಎಂಬ ಆರೋಪದಡಿ ರಾಷ್ಟ್ರೀಯ ತ್ರಿಪುರಾ ಮುಕ್ತಿ ರಂಗ (ಎನ್ಎಲ್‌ಎಫ್‌ಟಿ) ಮತ್ತು ಆಲ್ ತ್ರಿಪುರಾ ಟೈಗರ್‌ ಫೋರ್ಸ್ (ಎಟಿಟಿಎಫ್‌) ಸಂಘಟನೆಗಳನ್ನು ಕೇಂದ್ರ ಸರ್ಕಾರ ಐದು ವರ್ಷ ನಿಷೇಧಿಸಿದೆ. 

‘ಈ ಸಂಘಟನೆಗಳು ಹಿಂಸಾಕೃತ್ಯಗಳಲ್ಲಿ ತೊಡಗಿದ್ದವು. ಗುರಿ ಸಾಧನೆಗೆ ಜನರಲ್ಲಿ ಭಯೋತ್ಪಾದನೆ ಮತ್ತು ಹಿಂಸಾ ಮನೋಭಾವ ಬೆಳೆಸಲು ಒತ್ತು ನೀಡಿದ್ದವು‘ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಈ ಎರಡೂ ಸಂಘಟನೆಗಳು ಈಶಾನ್ಯ ರಾಜ್ಯಗಳ ಕಾನೂನು ಬಾಹಿರ ಸಂಘಟನೆಗಳ ಜೊತೆಗೆ ಸಂಪರ್ಕವನ್ನು ಹೊಂದಿದ್ದು, ತನ್ನ ಗುರಿ ಸಾಧನೆಗೆ ಅವುಗಳ ಬೆಂಬಲ ಪಡೆಯಲು ಒತ್ತು ನೀಡಿದ್ದವು ಎಂದು ತಿಳಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ 1967 ಅನ್ವಯ ಈ ಎರಡು ಸಂಘಟನೆಗಳ ಎಲ್ಲ ಶಾಖೆ, ಮುಂಚೂಣಿ ಶಾಖೆಗಳ ಕಾರ್ಯಚಟುಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಗೃಹ ಸಚಿವಾಲಯವು ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT