ನವದೆಹಲಿ:ಜಿಯೊ ಇನ್‌ಸ್ಟಿಟ್ಯೂಟ್‌ಗೆ ಕೇಂದ್ರಸರ್ಕಾರವು ‘ಉತ್ಕೃಷ್ಟ ಸಂಸ್ಥೆ’ (ಐಒಇ) ಸ್ಥಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಸರ್ಕಾರ ಅಂಬಾನಿ ಜೇಬಿನಲ್ಲಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ, ‘ಜಿಯೊ ಇನ್‌ಸ್ಟಿಟ್ಯೂಟ್ ಇನ್ನೂ ಅಸ್ತಿತ್ವದಲ್ಲಿಯೇ ಇಲ್ಲ. ಆದರೆ, ಆಗಲೇ ಸರ್ಕಾರ ಅದಕ್ಕೆ ಉತ್ಕೃಷ್ಟ ಸಂಸ್ಥೆಯ ಗರಿ ಕೊಟ್ಟಿದೆ. ಇದು ಎಂ. ಅಂಬಾನಿಯವರಿಗಿರುವ ಮಹತ್ವವೇ ಇದಕ್ಕೆ ಕಾರಣ’ ಎಂದು ಮಾಡಿದ್ದ ಟ್ವೀಟ್‌ಗೆ ಪ್ರತಿಯಾಗಿ, ಕೇಜ್ರಿವಾಲ್ ಟ್ವಿಟರ್‌ನಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಈ ಮೊದಲಿದ್ದ ಕಾಂಗ್ರೆಸ್ ಸರ್ಕಾರವೂ ಅಂಬಾನಿ ಜೇಬಿನಲ್ಲಿತ್ತು. ಈ ಸರ್ಕಾರವೂ ಅದೇ ರೀತಿ ಇದೆ. ಏನಾದರೂ ಬದಲಾವಣೆಯಾಗಿದೆಯೇ’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.