ನವದೆಹಲಿ: ಒಂದನೇ ತರಗತಿ ಪ್ರವೇಶಾತಿಗೆ ಮಕ್ಕಳ ಕನಿಷ್ಠ ವಯೋಮಿತಿಯನ್ನು 6 ವರ್ಷಕ್ಕೆ ನಿಗದಿ ಮಾಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಶಿಕ್ಷಣ ಸಚಿವಾಲಯ ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಪ್ರಕಾರ, ಎಲ್ಲ ಮಕ್ಕಳ ಆರಂಭಿಕ ಶಿಕ್ಷಣದ 5 ವರ್ಷದ(3ರಿಂದ 8 ವರ್ಷದವರೆಗೆ) ಕಲಿಕೆಯಲ್ಲಿ 3 ವರ್ಷ ಪ್ರೀಸ್ಕೂಲ್ ಶಿಕ್ಷಣ ಮತ್ತು 1 ಹಾಗೂ 2ನೇ ತರಗತಿಯ ವ್ಯಾಸಂಗ ಇರುತ್ತದೆ.

'ಪ್ರಿಸ್ಕೂಲ್‌ನಿಂದ 2ನೇ ತರಗತಿಯವರೆಗಿನ ಮಕ್ಕಳ ತಡೆರಹಿತ ಕಲಿಕೆ ಮತ್ತು ಬೆಳವಣಿಗೆಯನ್ನು ನೀತಿಯು ಉತ್ತೇಜಿಸುತ್ತದೆ. ಅಂಗನವಾಡಿಗಳು ಅಥವಾ ಸರ್ಕಾರಿ, ಸರ್ಕಾರಿ-ಅನುದಾನಿತ, ಖಾಸಗಿ ಮತ್ತು ಎನ್‌ಜಿಒ ಶಾಲೆಗಳಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ಮೂರು ವರ್ಷಗಳ ಗುಣಮಟ್ಟದ ಪ್ರಿಸ್ಕೂಲ್ ಶಿಕ್ಷಣವನ್ನು ಖಾತ್ರಿಪಡಿಸುವ ಮೂಲಕ ಇದನ್ನು ಅಳವಡಿಸಿಕೊಳ್ಳಬೇಕು’ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.

‘ಹೊಸ ಶಿಕ್ಷಣ ನೀತಿಯ ಜೊತೆ ವಯಸ್ಸನ್ನು ಹೊಂದಿಸಲು ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು ಆರು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟಿರಬೇಕು ಎಂಬ ನಿಯಮವನ್ನು ಜಾರಿ ಮಾಡಲು ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ’ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.