ನವದೆಹಲಿ: ಕೇಂದ್ರದ ಮಾಜಿ ಸಚಿವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ನೀಡಿದ್ದ ಬಂಗಲೆಯನ್ನು ಖಾಲಿ ಮಾಡುವಂತೆ ಅವರ ಪುತ್ರ ಸಂಸದ ಚಿರಾಗ್ ಪಾಸ್ವಾನ್ ಅವರಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸೂಚಿಸಿದೆ.

ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ನಿಧನರಾಗುವವರೆಗೂ ಸುಮಾರು ಮೂರು ದಶಕಗಳ ಕಾಲ ‘12 ಜನಪಥ್’ ಬಂಗಲೆಯಲ್ಲಿಯೇ ವಾಸವಾಗಿದ್ದರು. 1989ರಿಂದ 2020ರ ತನಕ ಅವರು ಇದೇ ಬಂಗಲೆಯಲ್ಲಿ ನೆಲೆಸಿದ್ದರು.

ರಾಮ್ ವಿಲಾಸ್ ಅವರ ನಿಧನದ ನಂತರ ಅವರ ಪತ್ನಿ, ಪುತ್ರ ಚಿರಾಗ್ ಮತ್ತು ಅವರ ಕುಟುಂಬದ ಸದಸ್ಯರು ಇಲ್ಲಿ ತಂಗಿದ್ದಾರೆ.

‘ಬಂಗಲೆಯನ್ನು ಕೇಂದ್ರ ಮಂತ್ರಿಗಳಿಗೆ ಮೀಸಲಿಡಲಾಗಿದೆ ಮತ್ತು ಸರ್ಕಾರಿ ವಸತಿಗೃಹದ ನಿವಾಸಿಗಳು ಅದನ್ನು ಖಾಲಿ ಮಾಡುವಂತೆ ಕೋರಲಾಗಿದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಗಲೆ ತೆರವು ಸೂಚನೆಗೆ ಸಂಬಂಧಿಸಿದಂತೆ ಚಿರಾಗ್ ಪಾಸ್ವಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.