ನವದೆಹಲಿ: ಉದಯಪುರದಲ್ಲಿ ನಡೆದ ಹತ್ಯೆಯನ್ನು ಪ್ರೋತ್ಸಾಹಿಸುವ, ವೈಭವೀಕರಿಸುವ ಅಥವಾ ಸಮರ್ಥಿಸುವ ವಿಷಯಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ತೆಗೆದುಹಾಕುವ ಅಗತ್ಯವಿದೆ ಎಂದು ವಿದ್ಯುನ್ಮಾನ ಮತ್ತುಮಾಹಿತಿ ಸಚಿವಾಲಯ ಶುಕ್ರವಾರ ಹೇಳಿದೆ.

ರಾಜಸ್ಥಾನದ ಉದಯಪುರದ ನಿವಾಸಿ ಕನ್ಹಯ್ಯಾ ಲಾಲ್ ಅವರನ್ನು ಮಂಗಳವಾರ ರಿಯಾಜ್ ಅಖ್ತಾರಿ ಮತ್ತು ಘೌಸ್ ಮೊಹಮ್ಮದ್ ಎಂಬುವವರು ಕತ್ತು ಸೀಳಿ ಕೊಂದಿದ್ದರು. ಅಲ್ಲದೆ, ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

‘ಉದಯಪುರದ ಹತ್ಯೆಯನ್ನು ಪ್ರೋತ್ಸಾಹಿಸುವ, ವೈಭವೀಕರಿಸುವ, ಸಮರ್ಥಿಸುವ ಯಾವುದೇ ವಿಷಯವನ್ನು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ತೆಗೆದು ಹಾಕಬೇಕು’ ಎಂದು ಜೂನ್ 29ರಂದು ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಉದಯಪುರದ ಹತ್ಯೆಯ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಕೆಲ ಮಂದಿ ಕೊಲೆಯನ್ನು ವೈಭವೀಕರಿಸುವ ಮತ್ತು ಸಮರ್ಥಿಸುವ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.