ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ, ‘ಒಂದು ರಾಷ್ಟ್ರ, ಒಂದೇ ಚುನಾವಣೆ’ಗೆ ಸಂಬಂಧಿತ ಎರಡು ಪ್ರತ್ಯೇಕ ಮಸೂದೆಗಳನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದೆ.

ಲೋಕಸಭೆ ಕಲಾಪ ಕಾರ್ಯಸೂಚಿಯಲ್ಲಿ ಈ ಅಂಶ ಸೇರ್ಪಡೆಗೊಂಡಿದೆ. ಮಸೂದೆಗೆ ಸಮ್ಮತಿ
ನೀಡಿ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ, ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿತ್ತು.

ಕೇಂದ್ರ ಕಾನೂನು ಸಚಿವ ಅರುಣ್ ರಾಮ್ ಮೇಘವಾಲ್ ಅವರು ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ ಹಾಗೂ ‘ಕೇಂದ್ರ ಪ್ರಾಂತ್ಯವಾರು ಕಾಯ್ದೆಗಳು (ತಿದ್ದುಪಡಿ)’ ಮಸೂದೆ ಮಂಡಿಸಲಿದ್ದಾರೆ.

ವಿಧಾನಸಭೆ ಅಸ್ತಿತ್ವದಲ್ಲಿರುವ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿರುವ ಕಾಯ್ದೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸಂಬಂಧಿಸಿದ ಮಸೂದೆಗೆ ಒಗ್ಗೂಡಿಸುವ ಒಂದು ಸರಳ ಮಸೂದೆ ಹಾಗೂ ಸಂವಿಧಾನ (ತಿದ್ದುಪಡಿ) ಮಸೂದೆಗಳಿಗೆ ಕೇಂದ್ರ ಸಂಪುಟ ಈಚೆಗೆ ಅನುಮೋದನೆ ನೀಡಿತ್ತು.

ಉದ್ದೇಶಿತ ತಿದ್ದುಪಡಿ ಮಸೂದೆಗಳು ದೇಶದಲ್ಲಿ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆಯನ್ನು ನಡೆಸಲು ಅವಕಾಶ ಕಲ್ಪಿಸಲಿವೆ.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ರಾಷ್ಟ್ರೀಯ, ರಾಜ್ಯ ಚುನಾವಣೆಗಳ ಜೊತೆಗೆ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸಲು ಪ್ರಸ್ತಾಪ ಮಾಡಿತ್ತು. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಅಂಶವನ್ನು ‘ಸದ್ಯಕ್ಕೆ’ ಪರಿಗಣಿಸದಿರಲು ಸಂಪುಟ ತೀರ್ಮಾನಿಸಿತ್ತು.

‘ವೆಚ್ಚ ತಗ್ಗಲಿದೆ ಸಮಯ ಉಳಿಯಲಿದೆ...’

ನವದೆಹಲಿ (ಪಿಟಿಐ): ಚುನಾವಣೆಗಳು ದುಬಾರಿ ಆಗುತ್ತಿವೆ ಹಾಗೂ ಹೆಚ್ಚಿನ ಸಮಯ ತಗುಲುತ್ತಿದೆ ಎಂಬುದೂ ಸೇರಿ ವಿವಿಧ ಕಾರಣಗಳಿಗಾಗಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಅಗತ್ಯ ಎಂದು ಉಲ್ಲೇಖಿತ ಮಸೂದೆಯಲ್ಲಿ ಹೇಳಲಾಗಿದೆ. ಲೋಕಸಭೆಯಲ್ಲಿ ಮಂಡಿಸಲಿರುವ ಕರಡು ಮಸೂದೆ ಪ್ರಕಾರ ‘ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಿಂದ ಅಭಿವೃದ್ಧಿ ಯೋಜನೆಗಳ ಮೇಲೆ ಪರಿಣಾಮವಾಗಲಿದೆ. ಸಾಮಾನ್ಯ ಜನಜೀವನ ಏರುಪೇರಾಗಲಿದೆ.’ ಆಗಾಗ್ಗೆ ವಿವಿಧೆಡೆ ನೀತಿ ಸಂಹಿತೆ ಜಾರಿ ಅಧಿಕ ಮಾನವಶಕ್ತಿಯ ಬಳಕೆಯಿಂದಾಗಿ ಅಭಿವೃದ್ಧಿ ಯೋಜನೆಗಳ ಜಾರಿ ಅವಧಿಯೂ ಲಂಬಿಸಲಿದೆ ಎಂದು ಸಂವಿಧಾನ (129ನೇ) ತಿದ್ದುಪಡಿ ಮಸೂದೆಯ ಕರಡುಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ತಪ್ಪಿಸಲು ಲೋಕಸಭೆ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಆಗುವಂತೆ ಮೂರು ಭಿನ್ನ ವಿಧಿಗಳಿಗೆ ತಿದ್ದುಪಡಿ ತರುವುದು ಹಾಗೂ ಸಂವಿಧಾನಕ್ಕೆ ಹೊಸ ವಿಧಿ ಸೇರ್ಪಡೆಗೊಳಿಸುವುದು ಕೇಂದ್ರದ ಈಗಿನ ಉದ್ದೇಶ. ಕರಡು ಮಸೂದೆಯ ಪ್ರಕಾರ ನೂತನ ಲೋಕಸಭೆಯ ಅವಧಿ ಅದು ಅಸ್ತಿತ್ವಕ್ಕೆ ಬಂದ ದಿನದಿಂದ ಐದು ವರ್ಷಗಳು. ವಿಧಾನಸಭೆಗಳ ಅವಧಿ ಚುನಾವಣೆ ನಡೆದು ಅಸ್ತಿತ್ವಕ್ಕೆ ಬಂದ ದಿನದಿಂದ ಲೋಕಸಭೆ ಪೂರ್ಣಾವಧಿ ಮುಗಿಯುವವರೆಗೆ ಇರಲಿದೆ. ಒಂದು ವೇಳೆ ರಾಜ್ಯಗಳಲ್ಲಿ ವಿಧಾನಸಭೆಯನ್ನು ಅವಧಿಪೂರ್ವದಲ್ಲಿ ವಿಸರ್ಜನೆ ಮಾಡುವ ಸಂದರ್ಭ ಎದುರಾದಲ್ಲಿ ಆ ವಿಧಾನಸಭೆ ಅವಧಿಯ ಬಾಕಿ ಉಳಿದಿರುವ ನಿರ್ದಿಷ್ಟ ಅವಧಿಗೆ ಅನ್ವಯಿಸಿದಂತೆ ಚುನಾವಣೆ ನಡೆಸಲಾಗುವುದು. ಜನಪ್ರತಿನಿಧಿಗಳ ಸಭೆ (ಲೋಕಸಭೆ) ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಈ ಹಿಂದೆ 1951–52 1957 1962 ಮತ್ತು 1967ರಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲಾಗಿತ್ತು. ಆದರೆ 1968 ಮತ್ತು 1969ರಲ್ಲಿ ಕೆಲ ವಿಧಾನಸಭೆಗಳನ್ನು ಅವಧಿ ಪೂರ್ವದಲ್ಲಿಯೇ ವಿಸರ್ಜಿಸಿದ ಸಂದರ್ಭ ಎದುರಾದ್ದರಿಂದ ಏಕಕಾಲದಲ್ಲಿ ಚುನಾವಣೆ ನಡೆಸುವ ವ್ಯವಸ್ಥೆ ಏರುಪೇರುಗೊಂಡಿತು ಎಂದೂ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.