ನೋಯ್ಡಾ: ‘ಹನಿಟ್ರ್ಯಾಪ್’ನಲ್ಲಿ ಸಿಲುಕಿ ಅಪಹರಣಕ್ಕೊಳಗಾಗಿದ್ದ ಸರ್ಕಾರದ ಉನ್ನತ ಸಂಸ್ಥೆಯೊಂದರ ವಿಜ್ಞಾನಿಯೊಬ್ಬರನ್ನು ನೋಯ್ಡಾದ ಹೋಟೆಲ್ ರೂಂನಲ್ಲಿ ರಕ್ಷಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿರುವ ಸರ್ಕಾರದ ಉನ್ನತ ಸಂಸ್ಥೆಯೊಂದರಲ್ಲಿ ಕಿರಿಯ ವಿಜ್ಞಾನಿಯಾಗಿದ್ದ ವ್ಯಕ್ತಿಯನ್ನು ಸೆಕ್ಟರ್ 41ರಲ್ಲಿ ಶನಿವಾರ ಒಯೊ ಹೋಟೆಲ್ನಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ರಣವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ಅಪಹರಣಕಾರರು ವಿಜ್ಞಾನಿ ಬಿಡುಗಡೆಗಾಗಿ ಆತನ ಪತ್ನಿಗೆ ₹ 10ಲಕ್ಷದ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ವಿಜ್ಞಾನಿ ಪತ್ನಿ ಪೊಲೀಸರ ಗಮನಕ್ಕೆ ತಂದಿದ್ದರು. ಗೌತಮ್ ಬುದ್ಧ ನಗರದ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಪೊಲೀಸರು, ವಿಜ್ಞಾನಿಯನ್ನು ಅಪಹರಣಕಾರರಿಂದ ರಕ್ಷಿಸಿದ್ದಾರೆ.

ವಿವರ: ಹೆಂಡತಿಗೆ ಗೊತ್ತಿಲ್ಲದಂತೆ ವಿಜ್ಞಾನಿ ಗೂಗಲ್ನಲ್ಲಿ ದೊರೆತ ಮಸಾಜ್ ಪಾರ್ಲರ್ಲ್ ನಂಬರ್ಗೆ ಕರೆ ಮಾಡಿದ್ದರು. ಆರೋಪಿಗಳು ಹೋಟೆಲ್ನಲ್ಲಿ ಮಸಾಜ್ ಮಾಡುವುದಾಗಿ ವಿಜ್ಞಾನಿಯನ್ನು ಕರೆಸಿ ಬಂಧನದಲ್ಲಿರಿಸಿ, ಅವರ ಪತ್ನಿಗೆ ಕರೆ ಮಾಡಿ ₹10ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣವನ್ನು ಹೊಂದಿಸಲಾಗದೇ ಪತ್ನಿ, ಪೊಲೀಸರಿಗೆ ಕರೆ ಮಾಡಿದ್ದರು. ನಂತರ ವಿಜ್ಞಾನಿಯನ್ನು ಹೋಟೆಲ್ನಿಂದ ರಕ್ಷಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.