ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇದು ಸೆಪ್ಟೆಂಬರ್ 30ರಂದು ವರದಿ ಸಲ್ಲಿಸಬೇಕಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸುವ ಪರೀಕ್ಷೆಯು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ನಡೆಯುವಂತೆ ಮಾಡಲು ತೆಗೆದುಕೊಳ್ಳಬೇಕಿರುವ ಕ್ರಮಗಳನ್ನು ಸಮಿತಿಯು ಸೂಚಿಸಬೇಕಿದೆ. ಆದರೆ ಹೆಚ್ಚುವರಿಯಾಗಿ ಮೂರು ವಾರಗಳ ಸಮಯ ಬೇಕು ಎಂದು ಕೇಂದ್ರವು ಕೇಳಿಕೊಂಡಿದೆ.