ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1971ರ ಯುದ್ಧದಲ್ಲಿ ಭಾರತಕ್ಕೆ ಪಾಕ್‌ ಶರಣಾದ ಚಿತ್ರ ಹಂಚಿಕೊಂಡ ಸರ್ಕಾರ

Last Updated 16 ಡಿಸೆಂಬರ್ 2022, 10:50 IST
ಅಕ್ಷರ ಗಾತ್ರ

ನವದೆಹಲಿ: ‘ವಿಜಯ ದಿನ’ದ ಪ್ರಯುಕ್ತ ಭಾರತೀಯ ಸೈನಿಕರಿಗೆ ಸರ್ಕಾರ ಗೌರವ ಸಲ್ಲಿಸಿದೆ. 1971ರ ಯುದ್ಧದಲ್ಲಿ ಸೋತು ಭಾರತಕ್ಕೆ ಶರಣಾಗುತ್ತಿರುವ ಪಾಕಿಸ್ತಾನದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

1971ರ ಇಂಡೋ-ಪಾಕ್‌ ಯುದ್ಧದ ವಿಜಯ ಮತ್ತು ಬಾಂಗ್ಲಾದೇಶದ ವಿಮೋಚನೆಯ ಸ್ಮರಣೆಗಾಗಿ ಪ್ರತಿವರ್ಷ ಡಿಸೆಂಬರ್ 16 ರಂದು ಭಾರತದಲ್ಲಿ ವಿಜಯ ದಿನ ಆಚರಣೆ ಮಾಡಲಾಗುತ್ತದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಭಾರತ ಸರ್ಕಾರ (@mygovindia), ‘1971ರ ಯುದ್ಧದಲ್ಲಿ ಹೋರಾಡಿದ ನಮ್ಮ ಕೆಚ್ಚೆದೆಯ ಸೈನಿಕರಿಗೆ ವಿಜಯ ದಿನದ ಈ ಸಂದರ್ಭದಲ್ಲಿ ನಮಿಸುತ್ತೇವೆ. ರಾಷ್ಟ್ರದ ಸುರಕ್ಷತೆಯನ್ನು ಖಾತ್ರಿಪಡಿಸಿದ ಅವರ ತ್ಯಾಗಕ್ಕೆ ರಾಷ್ಟ್ರವು ಗೌರವ ಸಲ್ಲಿಸುತ್ತದೆ’ ಎಂದು ಸರ್ಕಾರ ಟ್ವೀಟ್‌ ಮಾಡಿದೆ.

ಪಾಕಿಸ್ತಾನವು ಭಾರತಕ್ಕೆ ಶರಣಾಗುತ್ತಿರುವ ಫೋಟೊವನ್ನು ಇದೇ ಟ್ವೀಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT