ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್‌: ನದಿಯಲ್ಲಿ ಮುಳುಗಿ 8 ಜನ ಸಾವು

Published : 13 ಸೆಪ್ಟೆಂಬರ್ 2024, 21:06 IST
Last Updated : 13 ಸೆಪ್ಟೆಂಬರ್ 2024, 21:06 IST
ಫಾಲೋ ಮಾಡಿ
Comments

ಅಹಮದಾಬಾದ್‌: ಗಾಂಧಿನಗರ ಜಿಲ್ಲೆಯಲ್ಲಿ ಮೋಶ್ವಾ ನದಿಯಲ್ಲಿ 8 ಜನರು ಮುಳುಗಿ ಶುಕ್ರವಾರ ಮೃತಪಟ್ಟಿದ್ಧಾರೆ.

ಮೃತರು ದೆಹ್ಗಾಮ್‌ ತಾಲ್ಲೂಕಿನ ವಾಸ್ನಾ ಸೋಗ್ತಿ ಗ್ರಾಮದವರು ಎಂದು ಉಪವಿಭಾಗಾಧಿಕಾರಿ ಬಿ.ಬಿ.ಮೋದಿಯಾ ತಿಳಿಸಿದ್ದಾರೆ.

ಗಣೇಶ ಮೂರ್ತಿ ವಿಸರ್ಜನೆಗಾಗಿ ನದಿಗೆ ತೆರಳಿದ್ದ ಗ್ರಾಮಸ್ಥರ ಗುಂಪೊಂದು ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ, 8 ಜನರ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.

‘ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದರು. ಆದರೆ, ಸುರಕ್ಷಿತವಾಗಿ ಗ್ರಾಮಕ್ಕೆ ಮರಳಿರುವುದು ಗೊತ್ತಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT