ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gujarat Election Result | ಗುಜರಾತ್‌ನಲ್ಲಿ ಸೋತರೂ ಎಎಪಿ ಹೊಸ ಮೈಲಿಗಲ್ಲು

ಇಷ್ಟು ಸೀಟು ಗೆದ್ದರೆ ಆಮ್‌ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಸ್ಥಾನಮಾನ
Last Updated 8 ಡಿಸೆಂಬರ್ 2022, 5:52 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ಮಾಡಿದ ಸಲುವಾಗಿಯೂ, ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಆಮ್‌ ಅದ್ಮಿ ಪಕ್ಷ ವಿಫಲವಾಗಿದೆ. ಆದರೂ ಆಮ್‌ ಆದ್ಮಿ ಪಕ್ಷವು ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷವು ಕನಿಷ್ಠ 2 ಕ್ಷೇತ್ರಗಳಲ್ಲಿ ಗೆದ್ದು, ಶೇ 6 ರಷ್ಟು ಮತ ಪಡೆದುಕೊಂಡರೆ, ‘ರಾಷ್ಟ್ರೀಯ ಪಕ್ಷ‘ ಸ್ಥಾನಮಾನಕ್ಕೆ ಭಾಜನವಾಗಲಿದೆ.

ನಿಯಮಾವಳಿಗಳ ಪ್ರಕಾರ, ಪಕ್ಷವೊಂದು 4 ರಾಜ್ಯಗಳಲ್ಲಿ, ಕನಿಷ್ಠ 2 ಶಾಸಕರನ್ನು ಹೊಂದಿ, ಶೇ 6 ರಷ್ಟು ಮತ ಪಡೆದರೆ ಆ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಗುತ್ತದೆ.

ಆಮ್‌ ಆದ್ಮಿ ಪಕ್ಷವು ಈಗಾಗಲೇ ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರದಲ್ಲಿದೆ. ಗೋವಾದಲ್ಲಿ ಇಬ್ಬರು ಶಾಸಕರಿದ್ದು, ಶೇ 6 ಕ್ಕಿಂತ ಹೆಚ್ಚಿನ ಮತ ಪಡೆದಿದೆ.

ಗುಜರಾತ್‌ನಲ್ಲಿ ಒಂದು ವೇಳೆ ಎರಡು ಕ್ಷೇತ್ರಗಳನ್ನು ಗೆದ್ದುಕೊಂಡು, ಶೇ 6 ರಷ್ಟು ಮತ ಪಡೆದರೆ ಆಮ್‌ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷ ಎನಿಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT