ಅಹಮದಾಬಾದ್: ‘ಮಹಿಳೆಯರು ರಾತ್ರಿಯ ಪಾರ್ಟಿಗೆ ತೆರಳಬೇಡಿ, ಅತ್ಯಾಚಾರವಾಗಬಹುದು..’, ‘ಮಹಿಳೆಯರು ನಿರ್ಜನ ಪ್ರದೇಶಗಳಿಗೆ ನಿಮ್ಮ ಗೆಳೆಯರೊಂದಿಗೆ ತೆರಳಬೇಡಿ, ಸಾಮೂಹಿಕ ಅತ್ಯಾಚಾರವಾಗಬಹುದು..’ ಎನ್ನುವ ಪೋಸ್ಟರ್ಗಳನ್ನು ಅಹಮದಾಬಾದ್ನ ರಸ್ತೆ ವಿಭಜಕಗಳ ಮೇಲೆ ಅಂಟಿಸಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ನಗರದ ಕೆಲವು ಭಾಗಗಳಲ್ಲಿ ರಸ್ತೆ ವಿಭಜಕಗಳ ಮೇಲೆ ಈ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು. ಸುರಕ್ಷತಾ ಅಭಿಯಾನದ ಹೆಸರಿನಲ್ಲಿ ಅಹಮದಾಬಾದ್ ಸಂಚಾರಿ ಪೊಲೀಸರು ಈ ಅಭಿಯಾನಕ್ಕೆ ಪ್ರಾಯೋಜಕತ್ವ ವಹಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಚಾರಿ ಉಪ ಪೊಲೀಸ್ ಆಯುಕ್ತೆ ನೀತಾ ದೇಸಾಯಿ ‘ಸಂಚಾರಿ ಪೊಲೀಸರು ರಸ್ತೆ ಸುರಕ್ಷತೆಯ ಅಭಿಯಾನಕ್ಕೆ ಪ್ರಾಯೋಜನೆ ಮಾಡಿದ್ದಾರೆ. ಮಹಿಳಾ ಸುರಕ್ಷತೆ ಕುರಿತ ಅಭಿಯಾನಕ್ಕೆ ಅಲ್ಲ’ ಎಂದಿದ್ದಾರೆ.

‘ಸತಾರ್ಕ್ತಾ ಗ್ರೂಪ್ ಎನ್ನುವ ಎನ್ಜಿಒ ಅವರು ಶಾಲೆ ಮತ್ತು ಕಾಲೇಜುಗಳಲ್ಲಿ ರಸ್ತೆ ಸಂಚಾರ ಕುರಿತ ಸುರಕ್ಷತಾ ಅಭಿಯಾನ ಮಾಡುತ್ತೇವೆ ಎಂದು ಸಂಚಾರಿ ಪೊಲೀಸರ ನೆರವು ಕೇಳಿದ್ದರು. ನಮಗೆ ರಸ್ತೆ ಸುರಕ್ಷತಾ ಅಭಿಯಾನದ ಪೋಸ್ಟರ್ ತೋರಿಸಿದ್ದರು. ಆದರೆ, ಅನುಮತಿಯಿಲ್ಲದೆ ಈ ಪೋಸ್ಟರ್ ಅಂಟಿಸಿದ್ದಾರೆ. ನಮ್ಮ ಗಮನಕ್ಕೆ ಬಂದ ತಕ್ಷಣವೇ ತೆಗೆಯಲಾಗಿದೆ’ ಎಂದು ತಿಳಿಸಿದ್ದಾರೆ.

ಗುಜರಾತ್ನಲ್ಲಿ ಮಹಿಳಾ ಸುರಕ್ಷತೆಯ ಕುರಿತು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.