ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ಮೊಟ್ಟೆ ಪಲ್ಯ ಮಾಡಲು ನಿರಾಕರಿಸಿದ ಮಹಿಳೆ ಕೊಲೆ

Published 16 ಮಾರ್ಚ್ 2024, 16:13 IST
Last Updated 16 ಮಾರ್ಚ್ 2024, 16:13 IST
ಅಕ್ಷರ ಗಾತ್ರ

ಗುರುಗ್ರಾಮ: ಅಸ್ಸಾಂನ ಗುರುಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಸಹವಾಸಿಯನ್ನು ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಲಲ್ಲನ್ ಯಾದವ್ (35) ಬಂಧಿತ ಆರೋಪಿ. 

‘ತಿನ್ನಲು ಮೊಟ್ಟೆ ಪಲ್ಯ ಮಾಡಿಕೊಡುವಂತೆ ನನ್ನ ಸಹವರ್ತಿಯಾಗಿದ್ದ ಮಹಿಳೆಯನ್ನು ಕೇಳಿಕೊಂಡೆ. ಆದರೆ, ಆಕೆ ನಿರಾಕರಿಸಿದ್ದರಿಂದಾಗಿ ಕೋಪಗೊಂಡು ಆಕೆಯ ಮೇಲೆ ಸುತ್ತಿಗೆ ಮತ್ತು ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದೆ. ಇದರಿಂದ ಆಕೆ ಮೃತಪಟ್ಟಿದ್ದಳು. ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದೆ’ ಎಂದು ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. 

ಯಾದವ್, ಬಿಹಾರದ ಮಾಧೆಪುರ ಜಿಲ್ಲೆಯ ಅರಾಹಿ ಗ್ರಾಮದವನಾಗಿದ್ದು, ದೆಹಲಿಯ ಸರಾಯ್ ಕಾಲೇ ಖಾನ್ ಪ್ರದೇಶದಲ್ಲಿ ಅಡಗಿದ್ದ ಆತನನ್ನು ಪಾಲಂ ವಿಹಾರ ಪೊಲೀಸರು ಬಂಧಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT