ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕು ಎನ್ನುವ ಪ್ರಸ್ತಾವನೆಗೆ 194 ದೇಶಗಳನ್ನೊಳಗೊಂಡ ವಿಶ್ವ ಆರೋಗ್ಯ ಸಭೆಯಲ್ಲಿ ನಿನ್ನೆ (ಮೇ 19)ಸಹಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭಾರತವನ್ನು ಮೂರು ವರ್ಷಗಳ ಅವಧಿಗೆ ಮೇ ತಿಂಗಳಿನಿಂದ ಕಾರ್ಯನಿರ್ವಾಹಕ ಮಂಡಳಿಗೆ ಆಯ್ಕೆ ಮಾಡುವುದಾಗಿ ಸರ್ವಾನುಮತದಿಂದ ತೀರ್ಮಾನಿಸಿದ್ದರಿಂದಾಗಿ ಹರ್ಷವರ್ಧನ್ ಅವರು ಈ ಹುದ್ದೆಯನ್ನು ವಹಿಸಿಕೊಳ್ಳುತ್ತಿದ್ದಾರೆ.