ಚಂಡೀಗಢ: ಬೆಳೆಗಳಿಗೆ ಬೆಂಬಲ ಬೆಲೆಗೆ(ಎಂಎಸ್ಪಿ) ಕಾನೂನಿನ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರನ್ನು ಚದುರಿಸಲು ಪೊಲೀಸರು ಶಂಭು ಗಡಿ ಬಳಿ ತಡೆದು, ಅಶ್ರುವಾಯು ಪ್ರಯೋಗಿಸಿದ್ದಾರೆ.

ನೆರೆಯ ಹರಿಯಾಣ ಮತ್ತು ಪಂಜಾಬ್ಗೆ ಹೊಂದಿಕೊಂಡಿರುವ ಗಡಿ ಬಳಿ ಹಲವು ಪದರಗಳ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ.

ಅಶ್ರುವಾಯುವಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೆಲ ರೈತರು ಮುಖವನ್ನು ಮುಚ್ಚಿಕೊಂಡಿದ್ದರು. ಮತ್ತೆ ಕೆಲವರು ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಿದ್ದರು. ಕೆಲವರು ಕೆಲವು ಮೀಟರ್ಗಳಷ್ಟು ಹಿಂದಕ್ಕೆ ಸರಿದಿದ್ದರು. ಇನ್ನೂ ಕೆಲವರು ಒದ್ದೆಯಾದ ಸೆಣಬಿನ ಚೀಲಗಳಿಂದ ರಕ್ಷಣೆ ಪಡೆಯುತ್ತಿದ್ದದ್ದು ಕಂಡುಬಂದಿತು.

101 ರೈತರ ಗುಂಪು ಶಂಭು ಗಡಿಯಿಂದ ದೆಹಲಿಗೆ ಪಾದಯಾತ್ರೆಯನ್ನು ಇಂದು ಪುನರಾರಂಭಿಸಿತ್ತು.

ಕೆಲ ಮೀಟರ್ಗಳ ನಡಿಗೆ ಬಳಿ ರೈತರು ಬ್ಯಾರಿಕೇಡ್ ಮೀರಿ ನುಗ್ಗಲು ಯತ್ನಿಸಿದರು. ಈ ವೇಳೆ ಪಾದಯಾತ್ರೆಗೆ ಅನುಮತಿ ಪಡೆದಿರುವ ಪತ್ರ ತೋರಿಸುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಬಳಿಕ, ಅಶ್ರುವಾಯು ಪ್ರಯೋಗಿಸಿದ್ದಾರೆ.

ಶುಕ್ರವಾರ ಅಶ್ರುವಾಯು ಪ್ರಯೋಗದಿಂದ ಕೆಲವರು ಗಾಯಗೊಂಡಿದ್ದ ಹಿನ್ನೆಲೆ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.

ಎಂಎಸ್ಪಿ ಜೊತೆಗೆ ರೈತರ ವಿವಿಧ ಬೇಡಿಕೆಗಳ ಬಗ್ಗೆಯೂ ಸರ್ಕಾರ ಮಾತುಕತೆಗೆ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.