ನಾಸಿಕ್: ‘ಹಿಂದುತ್ವ ಸಿದ್ಧಾಂತವನ್ನು ನಾನು ತ್ಯಜಿಸಿಲ್ಲ. ಆದರೆ, ಬಿಜೆಪಿ ಅನುಸರಿಸುತ್ತಿರುವ ಅಹಿತಕರವಾದ ಹಿಂದುತ್ವವು ಸ್ವೀಕಾರಾರ್ಹವಲ್ಲ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬುಧವಾರ ಹೇಳಿದರು.

ನಾಸಿಕ್ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ‘ಶಿವಸೇನಾ (ಯುಬಿಟಿ) ಹಿಂದುತ್ವವನ್ನು ತ್ಯಜಿಸಿದೆ ಎಂಬ ಸುಳ್ಳನ್ನು ಬಿಜೆಪಿ ಹರಡುತ್ತಿದೆ. ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಸಮಾನವಾಗಿ ನೋಡಿದ ಕಾರಣ ಮುಸ್ಲಿಮರು ನಮ್ಮ ಪಕ್ಷವನ್ನು ಬೆಂಬಲಿಸಿದರು’ ಎಂದರು.

ಅಲ್ಲದೇ ‘ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರವು ಮುಂಬೈನಲ್ಲಿರುವ ರಾಜ ಭವನದ ಆವರಣವನ್ನು ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕವನ್ನು ನಿರ್ಮಿಸಬೇಕು. ರಾಜ್ಯಪಾಲರನ್ನು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಹೇಳಿದರು.

‘ಅವಿಭಜಿತ ಶಿವಸೇನೆ ಇಲ್ಲದಿದ್ದರೆ ಬಿಜೆಪಿಯು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಹಂತ ತಲುಪುತ್ತಿರಲಿಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.