ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಹೆಪಟೈಟಿಸ್‌ನಿಂದ ವ್ಯಕ್ತಿ ಸಾವು: ಜಾಗರೂಕರಾಗಿರಲು ಆರೋಗ್ಯ ಇಲಾಖೆ ಸೂಚನೆ

Published 10 ಮೇ 2024, 12:29 IST
Last Updated 10 ಮೇ 2024, 12:29 IST
ಅಕ್ಷರ ಗಾತ್ರ

ಮಲಪ್ಪುರಂ: ಹೆಪಟೈಟಿಸ್‌ ಕಾಯಿಲೆಯಿಂದಾಗಿ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಶುಕ್ರವಾರ 41 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಜಾಗರೂಕರಾಗಿರುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ. 

ಕಳೆದ ಮೂರು ತಿಂಗಳಲ್ಲಿ ಕೇರಳದಲ್ಲಿ ಆರು ಜನರಲ್ಲಿ ಹೆಪಟೈಟಿಸ್‌ ಕಾಯಿಲೆ ದೃಢಪಟ್ಟಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಲಪ್ಪುರಂ ಜಿಲ್ಲಾ ಆರೋಗ್ಯಾಧಿಕಾರಿ ರಾ. ರೇಣುಕಾ,  ‘ಜನವರಿಯಿಂದ ಇಲ್ಲಿಯವರೆಗೆ 1,032 ಜನರಲ್ಲಿ ಕಾಯಿಲೆ ದೃಢಪಟ್ಟಿದೆ. 3,184 ಶಂಕಿತ ಹೆಪಟೈಟಿಸ್‌ ಇರಬಹುದು ಎಂದು ಶಂಕಿಸಲಾಗಿದೆ. ಮೃತ ಐವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಐವರು ಹೆಪಟೈಟಿಸ್‌ ಶಂಕಿತರೂ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವೈರಸ್‌ಗಳ ಗುಂಪಿಗೆ ಸೇರಿದ ಸೂಕ್ಷ್ಮಾಣುಜೀವಿಗಳಿಂದ ಹೆಪಟೈಟಿಸ್ ಉಂಟಾಗುತ್ತದೆ.

ಹೆಪಟೈಟಿಸ್‌ ಲಕ್ಷಣಗಳೆಂದರೆ.

ಜ್ವರ, ಹಸಿವಿನ ಕೊರತೆ, ವಾಕರಿಕೆ, ವಾಂತಿ, ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು, ಹಳದಿ ಮೂತ್ರದಂತಹ ರೋಗಲಕ್ಷಣಗಳು ಕಂಡುಬರುತ್ತವೆ.

ತೀವ್ರತರವಾದ ಪ್ರಕರಣಗಳಲ್ಲಿ, ಯಕೃತ್ತಿನ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು, ಇದು ಸಾವಿಗೂ ಕಾರಣವಾಗಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT