ನವದೆಹಲಿ: ಸಂಸತ್ತಿನ ಊಟದ ಪಟ್ಟಿ ಪರಿಷ್ಕರಿಸಲಾಗಿದ್ದು, ಸಂಸದರಿಗೆ, ಅಧಿಕಾರಿಗಳಿಗೆ ಹಾಗೂ ಪ್ರವಾಸಿಗರಿಗೆ ಇನ್ನು ಮುಂದೆ ರಾಗಿ ಸಿರಿಧಾನ್ಯ ಇಡ್ಲಿ, ಜೋಳದ ಉಪ್ಪಿಟ್ಟು, ಗ್ರಿಲ್ ಫಿಶ್ ಮುಂತಾದ ‘ಆರೋಗ್ಯ ಪಟ್ಟಿ’ ಸಿದ್ಧವಾಗಿದೆ.
.ಸಂಸತ್ ಭದ್ರತಾ ಲೋಪ ಪ್ರಕರಣ; ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿರ್ದೇಶನದಂತೆ, ರುಚಿಗೆ ಭಂಗ ಬಾರದಂತೆ ಹೊಸ ಮೆನು ರೂಪಿಸಲಾಗಿದೆ. ಸಂಸತ್ ಅಧಿವೇಶನದ ದೀರ್ಘ ಚರ್ಚೆ ವೇಳೆ ಸಂಸದರು ಹಾಗೂ ಅಧಿಕಾರಿಗಳು ರುಚಿಕರ ಹಾಗೂ ಆರೋಗ್ಯಕರ ಪಾಕ ಸವಿಯಲು ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಆರೋಗ್ಯಕರ ಜೀವನ ಶೈಲಿ ಉತ್ತೇಜಿಸುವ ಜೊತೆಗೆ ಸಾಂಪ್ರದಾಯಿಕ ಪೌಷ್ಠಿಕಾಂಶ ಇರುವ ಆಹಾರವನ್ನು ಪರಿಚಯಿಸಲಾಗಿದೆ.

ಸ್ವಾದಿಷ್ಠಕರ ಕರಿ, ಥಾಲಿ ಜೊತೆಗೆ ಸಿರಿಧಾನ್ಯ ಆಧಾರಿತ ಊಟ, ನಾರಿನಾಂಶಯುಕ್ತ ಸಲಾಡ್ ಹಾಗೂ ಪ್ರೋಟಿನ್ಯುಕ್ತ ಸೂಪ್ಗಳು ಸವಿಯಲು ಸಿಗಲಿವೆ.
.ವಿದೇಶದಲ್ಲಿ ಸಿಂಧೂರ ಧ್ಯಾನ..ಸಂಸತ್ ಮೂಕವಾಗಿರುವುದು ವಿಷಾದನೀಯ: ಸಂಸದ ಕುಮಾರ ನಾಯಕ.
ಕಾರ್ಬೊಹೈಡ್ರೇಟ್ಗಳು, ಸೋಡಿಯಂ ಹಾಗೂ ಕ್ಯಾಲೊರಿಗಳು ಕಡಿಮೆ ಇರುವಂತೆ, ಅಗತ್ಯ ಪೋಷಕಾಂಶಗಳು ಹೆಚ್ಚಿರುವಂತೆ ಪ್ರತಿ ಖಾದ್ಯವನ್ನು ಎಚ್ಚರಿಕೆಯಿಂದ ರಚಿಸಲಾಗಿದೆ. ಹೊಸ ಆರೋಗ್ಯ ಪಟ್ಟಿಯಲ್ಲಿ ಪ್ರತಿ ಖಾದ್ಯದ ಮುಂದೆ ಅವುಗಳ ಕ್ಯಾಲೊರಿಗಳನ್ನು ಕೂಡ ನಮೂದಿಸಲಾಗುತ್ತದೆ.

ಊಟದ ಪಟ್ಟಿಯಲ್ಲಿ ರಾಗಿ ಸಿರಿಧಾನ್ಯ ಇಡ್ಲಿ ಜೊತೆಗೆ ಸಾಂಬರ್ ಅಥವಾ ಚಟ್ನಿ, (270 ಕ್ಯಾಲೊರಿಗಳು), ಜೋಳದ ಉಪ್ಪಿಟ್ಟು (206 ಕ್ಯಾಲೊರಿಗಳು) ಹಾಗೂ ಸಕ್ಕರೆ ರಹಿತ ಮಿಶ್ರ ಸಿರಿಧಾನ್ಯ ಖೀರು ( 160 ಕ್ಯಾಲೊರಿಗಳು) ಇದೆ.

ಚನಾ ಚಾಟ್, ಮೂಂಗ್ ದಾಲ್ ಚಿಲ್ಲಾ ಮುಂತಾದ ಪ್ರಖ್ಯಾತ ಖಾದ್ಯಗಳೂ ಪಟ್ಟಿಯಲ್ಲಿ ಜಾಗ ಪಡೆದಿವೆ.
.ಇಂದಿರಾ ಕ್ಯಾಂಟೀನ್ನಲ್ಲಿ ಹೊಸ ಮೆನು; ಮುದ್ದೆ, ಚಪಾತಿ, ಕೇಸರಿಬಾತ್ ಸೇರ್ಪಡೆ.
ಲಘು ಉಪಹಾರದ ಪಟ್ಟಿಯಲ್ಲಿ ಬರೇಲಿ ಹಾಗೂ ಜೋಳದ ಸಲಾಡ್ (294 ಕ್ಯಾಲೊರಿಗಳು), ಗಾರ್ಡನ್ ಫ್ರೆಶ್ ಸಲಾಡ್ (113 ಕ್ಯಾಲೊರಿಗಳು) ಜೊತೆಗೆ ರೋಸ್ಟ್ ಟೊಮೆಟೊ, ಬಸಿಲ್ ಶೋಬ್ರ ಹಾಗೂ ತರಕಾರಿ ಸೂಪ್ ಕೂಡ ಪಟ್ಟಿಯಲ್ಲಿದೆ.

ಬೇಯಿಸಿದ ತರಕಾರಿಗಳ ಜೊತೆಗೆ ಗ್ರಿಲ್ಡ್ ಚಿಕನ್ (157 ಕ್ಯಾಲೊರಿಗಳು) ಹಾಗೂ ಗ್ರಿಲ್ಡ್ ಫಿಶ್ (378 ಕ್ಯಾಲೊರಿಗಳು) ಮುಂತಾದ ಮಾಂಸಾಹಾರ ಖಾದ್ಯಗಳೂ ಇವೆ.

ಪಾನೀಯ ಪಟ್ಟಿಯಲ್ಲೂ ಆರೋಗ್ಯಕರ ಪೇಯಗಳಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಗ್ರೀನ್ ಹಾಗೂ ಗಿಡಮೂಲಿಕೆ ಚಹಾ, ಮಸಾಲ ಸಟ್ಟು, ಬೆಲ್ಲ ಸುವಾಸನೆಯ ಮಾವಿನ ಪನ್ನಾ ಮೆನುವಿನಲ್ಲಿದೆ.
.‘ಇಂದಿರಾ ಕ್ಯಾಂಟೀನ್ಗಳಿಗೆ ಜಿಲ್ಲಾವಾರು ಮೆನು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.