ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ರಾತ್ರಿಪೂರ ‌ಧಾರಾಕಾರ ಮಳೆ, ರಸ್ತೆ ಜಲಾವೃತ

Last Updated 15 ಅಕ್ಟೋಬರ್ 2020, 7:41 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿ ರಾತ್ರಿಪೂರ ಗುಡುಗು ಮಿಂಚಿನ ಸಮೇತ ಭಾರಿ ಮಳೆಯಾಗಿದ್ದು, ನಗರದ ಹಲವೆಡೆ ರಸ್ತೆಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

ಈ ಹಿಂದೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂಬೈ ಮತ್ತು ಠಾಣೆ ಜಿಲ್ಲೆಯಲ್ಲಿ ‘ಆರೆಂಜ್‌ ಅಲರ್ಟ್’‌ ಘೋಷಿಸಿತ್ತು. ಶುಕ್ರವಾರ ಮುಂಬೈ ಮತ್ತು ಉಪನಗರಗಳಲ್ಲಿ ‘ಯಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

‘ಬೆಳಗ್ಗಿನ ವೇಳೆಗೆ ಮಳೆ ಕಡಿಮೆಯಾದ್ದರಿಂದ ರಸ್ತೆಯಲ್ಲಿ ನಿಂತಿದ್ದ ನೀರಿನ ಪ್ರಮಾಣವು ಕಡಿಮೆಯಾಗಿದೆ. ಹಾಗಾಗಿಸಾರ್ವಜನಿಕಬಸ್‌, ರೈಲುಗಳ ಸಂಚಾರಕ್ಕೆ ಯಾವುದೇ ಅಡೆ ತಡೆ ಉಂಟಾಗಿಲ್ಲ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 106.01 ಮಿ.ಮೀ ಮಳೆ ಸುರಿದಿದೆ. ಪೂರ್ವ ಉಪನಗರಗಳಲ್ಲಿ69.18 ಮಿ.ಮೀ, ಪಶ್ಚಿಮ ಉಪನಗರಗಳಲ್ಲಿ58.36 ಮಿ.ಮೀ ಮಳೆಯಾಗಿದೆ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿ ತಿಳಿಸಿದರು.

ನೀರಿನಲ್ಲಿ ಕೊಚ್ಚಿಹೋದ ನಾಲ್ವರು:

ಪುಣೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಲ್ಲಿ ನಾಲ್ಕು ಮಂದಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.

ಪುಣೆಯ ಕನೋಟ ಗ್ರಾಮದಲ್ಲಿ ಬುಧವಾರ ಸಂಜೆ ಎರಡು ಬೈಕಿನಲ್ಲಿ ನಾಲ್ಕು ಜನರು ಹೊಳೆ ದಾಟಲು ಪ್ರಯಣಿಸುತ್ತಿದ್ದ ವೇಳೆ ಆಯಾತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೂರು ಮೃತದೇಹಗಳು ಸಿಕ್ಕಿವೆ. ಇನ್ನೊಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದುದೌಂಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದರು.

ಪುಣೆ, ಸೊಲ್ಹಾಪುರ ಮತ್ತು ಕೊಲ್ಹಾಪುರದಲ್ಲಿ ಬುಧವಾರ ಭಾರಿ ಮಳೆ ಸುರಿದಿದೆ. ಇದರಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಸೊಲ್ಹಾಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ (ಎನ್‌ಡಿಆರ್‌ಎಫ್)‌ ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪುಣೆಯಲ್ಲಿ 96 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT