ಇಂಫಾಲ: ಮಣಿಪುರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗಳ ಉಕ್ಕಿ ಹರಿಯುತ್ತಿದ್ದು, ಒಡ್ಡುಗಳು ಒಡೆದು ಹಠಾತ್ ಪ್ರವಾಹ ಸಂಭವಿಸಿದೆ. ಪರಿಣಾಮ 56 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದು, 10,477 ಮನೆಗಳು ಹಾನಿಗೀಡಾಗಿವೆ ಎಂದು ಸರ್ಕಾರ ಮಂಗಳವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರವಾಹದಿಂದ ಒಟ್ಟು 56,516 174 ಜನರು ತೊಂದರೆಗೀಡಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಿಂದ 2,913 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸೋಮವಾರ ವ್ಯಕ್ತಿಯೊಬ್ಬರು ಇಂಫಾಲದ ಪೂರ್ವ ಜಿಲ್ಲೆಯಲ್ಲಿ ನದಿಯಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕನಿಷ್ಠ 57 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದೆ. ಇಂಫಾಲದ ಪೂರ್ವ ಜಿಲ್ಲೆ ಅತಿ ಹೆಚ್ಚು ಪ್ರವಾಹಕ್ಕೆ ಸಿಲುಕಿರುವ ಪ್ರದೇಶವಾಗಿದೆ. ಕಳೆದ ಐದು ದಿನಗಳಲ್ಲಿ ರಾಜ್ಯದಾದ್ಯಂತ 93 ಕಡೆ ಭೂಕುಸಿತ ಸಂಭವಿಸಿದೆ.

ಇಂಫಾಲದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಖುರೈ, ಹೀಂಗಾಂಗ್ ಮತ್ತು ಚೆಕಾನ್ ಪ್ರದೇಶಗಳಲ್ಲಿ ನದಿಗೆ ಅಡ್ಡಲಾಗಿ ಕಟ್ಟಿರುವ ಒಡ್ಡುಗಳು ಒಡೆದು ನೀರು ಉಕ್ಕಿ ಹರಿಯುತ್ತಿವೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
.Manipur Flood | ಮಣಿಪುರದಲ್ಲಿ ಪ್ರವಾಹ ಪರಿಸ್ಥಿತಿ; 19 ಸಾವಿರ ಜನರಿಗೆ ಸಂಕಷ್ಟ.Northeast Floods | ಭಾರಿ ಮಳೆ: ಈಶಾನ್ಯ ರಾಜ್ಯಗಳು ತತ್ತರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.