ಮುಂಬೈ: ‘ಮರಾಠಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ 1ರಿಂದ 5ನೇ ತರಗತಿವರೆಗೆ ಕಡ್ಡಾಯವಾಗಿ ಕಲಿಸಬೇಕು’ ಎಂದು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

‘ಸರ್ಕಾರದ ಕ್ರಮವನ್ನು ಖಂಡಿಸಿರುವ ಮರಾಠಿ ಭಾಷಾ ಹೋರಾಟಗಾರರು, ಹಿಂಬಾಗಿಲ ಮೂಲಕ ಸರ್ಕಾರವು ಹಿಂದಿ ಹೇರುತ್ತಿದೆ’ ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಜತೆಯಲ್ಲಿ ‘ಶಾಲಾ ಶಿಕ್ಷಣಕ್ಕೆ ರಾಜ್ಯ ಪಠ್ಯಕ್ರಮ ಚೌಕಟ್ಟು 2024’ ಯೋಜನೆಯಡಿ ಹಿಂದಿಯನ್ನು ತೃತೀಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸುವಂತೆ ರಾಜ್ಯ ಸರ್ಕಾರ ಮಂಗಳವಾರ ಆದೇಶಿಸಿದೆ. ಒಂದೊಮ್ಮೆ ಹಿಂದಿಯನ್ನು ಹೊರತುಪಡಿಸಿ ಬೇರೆ ಭಾಷೆ ಕಲಿಯಲಿಚ್ಛಿಸಿದರೆ, ಅಂಥ ತರಗತಿಯಲ್ಲಿ ಆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಯಸುವ ಕನಿಷ್ಠ 20 ವಿದ್ಯಾರ್ಥಿಗಳು ಇರಬೇಕು. ವಿದ್ಯಾರ್ಥಿಗಳ ಆಯ್ಕೆಯ ಭಾಷೆ ಕಲಿಸಲು ಶಿಕ್ಷಕರೊಬ್ಬರನ್ನು ನಿಯೋಜಿಸಲಾಗುವುದು. ಆದರೆ ಇದು ಆನ್ಲೈನ್ ತರಗತಿಯಾಗಿರಲಿದೆ’ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.

ಸರ್ಕಾರದ ಆದೇಶವನ್ನು ವಿರೋಧಿಸಿರುವ ಹೋರಾಟಗಾರರು, ‘ಶಾಲಾ ಶಿಕ್ಷಣ ಸಚಿವ ದಾಬಾ ಭುಸೆ ಅವರು ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಎಂದಿಗೂ ಕಡ್ಡಾಯಗೊಳಿಸುವುದಿಲ್ಲ ಎಂಬ ಹೇಳಿಕೆಗೂ ಸರ್ಕಾರದ ನಡೆಗೂ ಭಾರಿ ವ್ಯತ್ಯಾಸವಿದೆ’ ಎಂದಿದ್ದಾರೆ.

ಒಂದನೇ ತರಗತಿಯಿಂದ ಹಿಂದಿಯನ್ನು ಕಲಿಸುವುದಾಗಿ ಸರ್ಕಾರ ಈ ವರ್ಷದ ಆರಂಭದಲ್ಲಿ ಹೇಳಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಏ. 22ರಂದು ಹೇಳಿಕೆ ನೀಡಿದ್ದ ಸಚಿವ ಭುಸೆ, ‘1ರಿಂದ 5ನೇ ತರಗತಿವರೆಗೂ ಹಿಂದಿಯನ್ನು ಕಡ್ಡಾಯಗೊಳಿಸುವುದಿಲ್ಲ’ ಎಂದಿದ್ದರು.

ಆದರೆ ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭುಸೆ, ‘ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಕಲಿಸುವ ಯೋಜನೆ ಮೊದಲೇ ನಿರ್ಧಾರಗೊಂಡಿತ್ತು. ಸದ್ಯಕ್ಕೆ ಈ ನಿರ್ಧಾರವನ್ನು ತಡೆಹಿಡಿಯಲಾಗಿದೆ. ಈ ವರ್ಷಕ್ಕೆ ದ್ವಿಭಾಷಾ ಕಲಿಕಾ ಸೂತ್ರವೇ ಜಾರಿಯಲ್ಲಿರಲಿದೆ’ ಎಂದಿದ್ದರು.

ಆದರೆ ಹಿಂದಿ ಕಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶಿಸಿದೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮರಾಠಿ ಭಾಷಾ ಅಭ್ಯಾಸ ಕೇಂದ್ರದ ದೀಪಕ್ ಪವಾರ್, ‘ಹಿಂದಿಯನ್ನು ಹಿಂಬಾಲಿನಿಂದ ತರುವುದು ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಮರಾಠಿಗರಿಗೆ ಸರ್ಕಾರ ದ್ರೋಹವೆಸಗಿದೆ. ಈಗ ಸುಮ್ಮನೆ ಕುಳಿತರೆ ಮುಂದೊಂದು ದಿನ ಇಡೀ ಒಕ್ಕೂಟ ವ್ಯವಸ್ಥೆ ಮತ್ತು ಸಂಯುಕ್ತ ಮಹಾರಾಷ್ಟ್ರ ಚಳವಳಿಯ ನಾಶಕ್ಕೆ ದಾರಿ ಮಾಡಿಕೊಟ್ಟಂತೆ. ಹೀಗಾಗಿ ಜನರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಬೇಕು’ ಎಂದಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಪ್ರೌಢಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ವಸಂತ ಕಲ್ಪಾಂಡೆ ಪ್ರತಿಕ್ರಿಯಿಸಿ, ‘ಬೇರೆ ಭಾಷೆ ಕಲಿಯಲು ಕನಿಷ್ಠ 20 ವಿದ್ಯಾರ್ಥಿಗಳಿರಬೇಕು ಹಾಗೂ ಅವರಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುವ ಸರ್ಕಾರದ ನಡೆಯೂ ಹಿಂದಿ ಹೊರತುಪಡಿಸಿ ಅನ್ಯಭಾಷೆಗಳನ್ನು ನಿರ್ಲಕ್ಷಿಸುವ ಧೋರಣೆಯನ್ನು ಸೂಚಿಸುತ್ತದೆ. ಹಿಂದಿ ಮತ್ತು ಮರಾಠಿ ಒಂದೇ ಮಾದರಿಯ ಲಿಪಿಯನ್ನು ಹೊಂದಿವೆ. ಎರಡೂ ಭಾಷೆಗಳ ಲಿಪಿಯ ವ್ಯತ್ಯಾಸವನ್ನು ಅರಿತು ಓದುವುದು ಎಳೆಯ ಮಕ್ಕಳಿಗೆ ಹೊರೆಯಾಗಲಿದೆ’ ಎಂದಿದ್ದಾರೆ.

‘ಗುಜರಾತ್ ಮತ್ತು ಅಸ್ಸಾಂನಲ್ಲಿ ಹಿಂದಿ ಕಡ್ಡಾಯವಿಲ್ಲ. ಹಾಗಿದ್ದರೆ ಮಹಾರಾಷ್ಟ್ರದಲ್ಲಿ ಏಕೆ ಈ ಹೇರಿಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.