ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈ ನಂತರ ಪುಣೆಯಲ್ಲಿ ಹೋರ್ಡಿಂಗ್ ದುರಂತ: ಮಿನಿ ಟ್ರಕ್‌ ಜಖಂ

Published 16 ಮೇ 2024, 15:53 IST
Last Updated 16 ಮೇ 2024, 15:53 IST
ಅಕ್ಷರ ಗಾತ್ರ

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಗುರುವಾರ ಬೀಸಿದ ಭಾರೀ ಬಿರುಗಾಳಿಗೆ ರಸ್ತೆಬದಿ ಅಳವಡಿಸಿದ್ದ ಹೋರ್ಡಿಂಗ್‌ ಕುಸಿದು ಮಿನಿ ಟ್ರಕ್‌ ಮೇಲೆ ಬಿದ್ದಿದೆ. 

ಮುಂಬೈನ ಘಾಟ್ಕೊಪರ್‌ನಲ್ಲಿ ಬೃಹತ್ ಹೋರ್ಡಿಂಗ್ ಕುಸಿದ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದ ಮತ್ತೊಂದು ಪ್ರಮುಖ ನಗರ ಪುಣೆಯಲ್ಲಿ ಅಂಥದ್ದೇ ಮಾದರಿಯ ಘಟನೆ ನಡೆದಿದೆ. ಘಾಟ್ಕೊಪರ್‌ ದುರಂತದಲ್ಲಿ 16 ಜನ ಮೃತಪಟ್ಟು, 75 ಜನ ಗಾಯಗೊಂಡಿದ್ದರು.

ಪುಣೆಯ ಮೊಶಿ ಪ್ರದೇಶದ ಜೈಗಣೇಶ್ ಸಾಮ್ರಾಜ್ಯ ಚೌಕ್‌ನ ರಸ್ತೆ ಬದಿ ಅಳವಡಿಸಿದ್ದ ಹೋರ್ಡಿಂಗ್‌ 30X30 ಅಡಿ ಗಾತ್ರದ್ದಾಗಿತ್ತು. ಸಂಜೆ 4.30ರ ಹೊತ್ತಿಗೆ ಇದು ಕುಸಿದಿದೆ. ಬಿದ್ದ ಹೋರ್ಡಿಂಗ್ ಅಡಿಯಲ್ಲಿ ಮಿನಿ ಟ್ರಕ್, ದ್ವಿಚಕ್ರ ವಾಹನಗಳು ಸಿಲುಕಿದವು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದ ಪಿಂಪ್ರಿ ಚಿಂಚ್ವಾಡ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಕ್ರೇತ್ ತರಿಸಿ ಬಿದ್ದ ಹೋರ್ಡಿಂಗ್‌ ಎತ್ತುವ ಕಾರ್ಯ ನಡೆಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT