ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಜಾರಿ: ಪಾಕ್‌ ಹಿಂದೂ ನಿರಾಶ್ರಿತರಿಗೆ ಸಂತಸ

Published 11 ಮಾರ್ಚ್ 2024, 15:56 IST
Last Updated 11 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನದ ಹಿಂದೂ ನಿರಾಶ್ರಿತರು, ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ, ‘ಕೊನೆಗೂ ನಮ್ಮನ್ನು ಭಾರತೀಯ ಪ್ರಜೆಗಳು ಎಂದು ಕರೆಯುವಂತಾಗಿದೆ’ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಹಿಂದೂ ನಿರಾಶ್ರಿತ ಸಮುದಾಯದ ಮುಖ್ಯಸ್ಥ ಧರ್ಮವೀರ್‌ ಸೋಲಂಕಿ, ‘ನಮ್ಮ‌ ಸಮುದಾಯದ ಸುಮಾರು 500 ಮಂದಿ ಪೌರತ್ವ ಪಡೆಯಲಿದ್ದೇವೆ’ ಎಂದು ಹೇಳಿದರು.

‘ಇದಕ್ಕಾಗಿ ದಶಕಗಳಿಂದ ಕಾಯುತ್ತಿದ್ದೆವು. ಕೊನೆಗೂ ನಮ್ಮನ್ನು ಭಾರತೀಯ ಪ್ರಜೆಗಳು ಎಂದು ಕರೆಯುವಂತಾಗಿರುವುದು ಅತೀವ ಸಂತಸ ತಂದಿದೆ. 2013ರಲ್ಲಿ ತವರಿಗೆ ವಾಪಸ್‌ ಬಂದು ನೆಲೆಸಿದ್ದಕ್ಕೂ ಸಾರ್ಥಕವಾಗಿದೆ. ಹೆಗಲ ಮೇಲಿದ್ದ ದೊಡ್ಡ ಭಾರವೊಂದು ಇಳಿಸಿಟ್ಟಂತೆ ಭಾಸವಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT